ಯುಪಿ ಸರ್ಕಾರಕ್ಕಿಂತ ಐದು ಹೆಜ್ಜೆ ಮುಂದೆ ಹೋಗುತ್ತೇವೆ: ನಡುಕ ಹುಟ್ಟಿಸಲು ನಾವು ತಯಾರಿದ್ದೇವೆ- ಸಚಿವ ಅಶ್ವತ್ ನಾರಾಯಣ್.

ರಾಮನಗರ,ಜುಲೈ,29,2022(www.justkannada.in):  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನಗಳಲ್ಲಿ  ಮೂರು ಕೊಲೆಗಳಾಗಿದ್ದು ಸಾಲು ಸಾಲು ಹತ್ಯೆಯು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಅಶ್ವಥ್ ನಾರಾಯಣ್, ಕೊಲೆಗಡುಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಈವರೆಗೆ  ಸಹಿಸಿಕೊಂಡಿದ್ಧೇವೆ. ಇನ್ನು ಸಹಿಸಲ್ಲ. ಮುಂದೆ ನಮ್ಮ ಆ್ಯಕ್ಷನ್ ಏನು ಅಂತಾ ತೋರಿಸುತ್ತೇವೆ ಎಂದಿದ್ದಾರೆ.

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್,  ಯುಪಿಗಿಂತಲೂ ಮುಂದಿನ ದಿನಗಳಲ್ಲಿ  ಒಳ್ಳೆ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ನಡುಕ ಹುಟ್ಟಿಸುವ ಕ್ರಮ ಕೈಗೊಳ್ಳುತ್ತೇವೆ. ಯುಪಿ ಸರ್ಕಾರಕ್ಕಿಂತ ಐದು ಹೆಜ್ಜೆ ಮುಂದೆ ಹೋಗುತ್ತೇವೆ. ಇತರರಿಗೆ ಮಾದರಿಯಾಗುವ ಕೆಲಸ ರಾಜ್ಯದಲ್ಲಿ ನಡೆಯುತ್ತದೆ. ತಾಳ್ಮೆಗೂ ಇತಿಮಿತಿ ಇದೆ. ಇನ್ಮೇಲೆ ಸಹಿಸಿಕೊಳ್ಳಲ್ಲ. ಮುಂದೆ ನಮ್ಮ ಆ್ಯಕ್ಷನ್ ತೋರಿಸುತ್ತೇವೆ. ನಡುಕ ಹುಟ್ಟಿಸಲು ನಾವು ತಯಾರಿದ್ದೇವೆ ಎಂದು ತಿಳಿಸಿದ್ದಾರೆ.

ಎನ್ ಕೌಂಟರ್ ಆಗುವ ಕಾಲ ಬರುತ್ತೆ.  ಎನ್ ಕೌಂಟರ್ ಗೂ ಸಿದ್ಧ ಎಂದು ಸಿಎಂ ಹೇಳಿದ್ದಾರೆ.  ಪ್ರವೀಣ ನೆಟ್ಟಾರು ಹತ್ಯೆಯಂತೆ ಬೇರೆ ಯಾರ ಹತ್ಯೆಯಾಗಬಾರದು. ಹತ್ಯೆಗಳು ಆದಾಗ ಆರೋಪಿಗಳನ್ನ ಬಂಧಿಸುವ ಕೆಲಸವಾಗಿದೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.

Key words: Praveen nettaru-murder case-action-  Minister -Ashwath Narayan.