ರೈತ ಸಂಘಟನೆಗಳ ಪ್ರತಿಭಟನೆ: ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದು ಹೀಗೆ….

ಮೈಸೂರು, ಸೆಪ್ಟೆಂಬರ್ 28, 2020 (www.justkannada.in): ಹಲವು ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಯಾವುದು ಜನ ವಿರೋಧಿ ಅಲ್ಲ ಅನ್ನೊದನ್ನ ಜನ ತೀರ್ಮಾನ ಮಾಡ್ತಾರೆ. ಮಂಡಿ ವ್ಯವಸ್ಥೆ 1886 ರಲ್ಲಿ ಬ್ರಿಟಿಷ್ರು ಮಾಡಿದ್ದರು. ನಮ್ಮ ರೈತರ ಮುಕ್ತವಾಗಿ ಮಾರಾಟ ಮಾಡಬರಾದ ಅನ್ನೊ ಕಾರಣಕ್ಕೆ ತಂದ್ರು. ಈ ವ್ಯವಸ್ಥೆ ಸ್ವತಂತ್ರ ನಂತರೂ ಮುಂದುವರೆದಿತ್ತು. ಬೆಳೆಯುವ ರೈತರು, ಗ್ರಾಹಕರೂ ಉದ್ದಾರ ಆಗಲಿಲ್ಲ. ಉದ್ದಾರ ಆದವರು ಮಂಡಿಯವರು ಎಂದು ಹೇಳಿದರು.

ಎಪಿಎಂಸಿ ಚುನಾವಣೆ ಕೋಟ್ಯಂತರ ರೂ ಖರ್ಚು ಮಾಡ್ತಾರೆ. ರೈತರ ಉದ್ದಾರ ಮಾಡುವ ಉದ್ದೇಶ ಇದ್ದಿದ್ದರೆ ಡೊಡ್ಡ ಪ್ರಮಾಣದ ರಾಜಕಾರಣ ಯಾಕೆ ಮಾಡುತ್ತಿದ್ದರು. ಕೆಲವು ಪಕ್ಷಗಳ ರಾಜಕಾರಣ ನಡೆಯೊದೆ ಸಹಕಾರ ಸಂಘಗಳ ಮೂಲಕ. ಅದನ್ನ ಅಂತ್ಯ ಮಾಡಿ ರೈತ ತನ್ನ ಬೆಳೆಯನ್ನು ಮುಕ್ತವಾಗಿ ವ್ಯಾಪಾರ ಮಾಡುವ ವ್ಯವಸ್ಥೆ ಸರ್ಕಾರ ಮಾಡಿದೆ ಎಂದರು.

ರೈತರಿಗೆ ಬೆಳೆ ಕಟಾವು ಮಾಡ್ತಾರೆ. ರೈತರಿಗೆ ಆಗ ಸೂಕ್ತ ಬೆಲೆ ಸಿಗುತ್ತೊ ಇಲ್ಲವೊ ತಿಳಿಯಲಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ಸಹಜವಾದ್ದು. ಧರಣಿ ಪ್ರತಿಭಟನೆ ಸಹಿಸಕೊಳ್ಳಬೇಕು. ಪ್ರತಿಭಟನೆ ಮಾಡುವವರು ಮುಕ್ತರು ಪ್ರತಿಭಟನೆ ಮಾಡಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.