ಎಂ. ಲಕ್ಷಣ್ ಹಾಗೂ ಹೆಚ್‍.ಡಿ ಕುಮಾರಸ್ವಾಮಿ ಆರೋಪಗಳನ್ನ ‘ಉಗುಳಿಗೆ ಸಮ’ ಎಂದು ಲೇವಡಿ ಮಾಡಿದ ಪ್ರತಾಪ್ ಸಿಂಹ…

ಮೈಸೂರು,ಸೆಪ್ಟಂಬರ್ 2,2020(www.justkannada.in):  ತಮ್ಮ ವಿರುದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮಾಡಿದ ಆರೋಪ ಮತ್ತು ಡ್ರಗ್ಸ್ ಹಣ‍ದಿಂದಲೇ ಮೈತ್ರಿ ಸರ್ಕಾರ ಬಿದ್ದಿದೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಎಂ. ಲಕ್ಷಣ್ ಹಾಗೂ ಹೆಚ್‍ಡಿಕೆ ಆರೋಪಗಳನ್ನ ಉಗುಳು ಎಂದು ಲೇವಡಿ ಮಾಡಿದ್ದಾರೆ. ಕೆಪಿಸಿಸಿ ವಕ್ತಾರ ಎಂ ಲಕ್ಷಣ್ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಉಗುಳಿಗೆ ನಾನು ಉತ್ತರ ಕೊಡೋಲ್ಲ. ಆರೋಪ ಮಾಡಿದರೆ ಸೂಕ್ತ ಸಾಕ್ಷಿ ಆಧಾರ ಇಟ್ಟುಕೊಂಡಿರಬೇಕು. ಇಲ್ಲವಾದರೆ ಅದೊಂದು ಉಗುಳು ಅಷ್ಟೇ.  ಅಂತಹ ಉಗುಳಿಗೆ ನಾನು ಉತ್ತರ ಕೊಡೊಲ್ಲ ಎಂದು ಟಾಂಗ್ ನೀಡಿದರು.

ಹಾಗೆಯೇ  ಡ್ರಗ್ಸ್ ಹಣ‍ದಿಂದಲೇ ಮೈತ್ರಿ ಸರ್ಕಾರ ಬಿದ್ದಿದೆ ಎಂಬ ಹೆಚ್‍ಡಿಕೆ ಹೇಳಿಕೆ, ಅದು ಸಹ ಆಧಾರ ರಹಿತ ಆರೋಪ. ಅಂತಹ ಆರೋಪಗಳೆಲ್ಲ ಉಗುಳಿಗೆ ಸಮ ಎಂದು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ಡ್ರಗ್ಸ್ ದಂಧೆ ಕೇವಲ ಸ್ಯಾಂಡಲ್‍ವುಡ್, ಬಾಲಿವುಡ್ ಅಷ್ಟೇ ಸಿಮಿತವಾಗಿಲ್ಲ….

ಇನ್ನು ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ,  ಡ್ರಗ್ಸ್ ದಂಧೆ ಟೆರರಿಸಂನ ಒಂದು ಭಾಗ. ಒಂದು ದೇಶವನ್ನ ಹಾಳು ಮಾಡಬೇಕಾದ್ರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದ್ರೆ ಸಾಕು. ಅವರ ಮುಂದಿನ ಇಡೀ ಕುಟುಂಬವನ್ನ ಸರ್ವನಾಶವಾಗಿಸಿ ಬಿಡುತ್ತದೆ. ಈ ದಂಧೆಯು  ಕೇವಲ ಸ್ಯಾಂಡಲ್‍ವುಡ್, ಬಾಲಿವುಡ್ ಅಷ್ಟೇ ಸಿಮಿತವಾಗಿಲ್ಲ. ಎಲ್ಲ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಈ ಘಟನೆಯನ್ನ ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ಣಾಮ ಮಾಡಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ. ಯಾವ ದೇಶದ ಯಾವ ಪ್ಲೇಡ್ಡರ್ ಇದ್ದಾರೆ ಅವರೆಲ್ಲರನ್ನ ಬಂಧಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.

ಡ್ರಗ್ಸ್ ಬಗ್ಗೆ ಮಾಹಿತಿ ಇರುವವರು ಮಾಹಿತಿ ಕೊಡಿ. ಎಲ್ಲ ಕಡೆ ರೇಡ್ ಆಗಲಿ. ಗೃಹಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.  ಶೀಘ್ರದಲ್ಲೆ ಇಡೀ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಲಿ ಎಂದರು.

ದಸರಾ ಆಚರಣೆ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಈ ಬಾರಿ ದಸರಾ ಆಚರಣೆ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ. ಮೈಸೂರಿನಲ್ಲೆ ಹೈಪವರ್ ಮೀಟಿಂಗ್ ನಡೆಯಲಿದೆ. ನಮಗೆ ದಸರಾ ಅನುಭವ ಇದೆ. ನಮ್ಮ ಹೊಸ ಡಿಸಿ ಹಾಗೂ ಹಳೆ ಡಿಸಿಯವರ ಅನುಭವ ಪಡೆದು ದಸರಾ ಮಾಡುತ್ತೇವೆ. ಯಾವುದು ಕಷ್ಟವಾಗೋಲ್ಲ. ಕೊರೋನಾ ಹಿನ್ನೆಲೆ ಹೇಗೆ ದಸರಾ ಆಚರಿಸಬೇಕು ಅಂತ ಸಿಎಂ ತೀರ್ಮಾನ ಮಾಡ್ತಾರೆ. ಈ ಬಾರಿಯ ದಸರಾಗೆ ನಾವು ಸಜ್ಜಾಗಿದ್ದೇವೆ ಎಂದು ನುಡಿದರು.

Key words: Pratap simha-kpcc spokesperson- Lakshan -HD Kumaraswamy -allegations.