ಸಲಾರ್ ಶೂಟಿಂಗ್ ಸೆಟ್ ಗೆ ಮೊಬೈಲ್ ನಿರ್ಬಂಧ ಹೇರಿದ ಪ್ರಶಾಂತ್ ನೀಲ್

Promotion

ಬೆಂಗಳೂರು, ಸೆಪ್ಟೆಂಬರ್ 28, 2022 (www.justkannada.in): ಸಲಾರ್ ಶೂಟಿಂಗ್ ಸೆಟ್ ಗೆ ಯಾರೇ ಬಂದರೂ , ಮೊಬೈಲ್ ತರದಂತೆ ನಿರ್ದೇಶಕ ಪ್ರಶಾಂತ್ ನೀಲ್ ನಿರ್ಬಂಧ ಹೇರಿದ್ದಾರೆ .

ಕೆಲ ದಿನಗಳ ಹಿಂದೆಯಷ್ಟೇ ಸಲಾರ್ (Salar) ಸಿನಿಮಾದ ಪ್ರಮುಖ ದೃಶ್ಯವೊಂದರ ಫೋಟೋಲೀಕ್ ಆಗಿ, ಭಾರೀ ವೈರಲ್ ಆಗಿತ್ತು. ಇಂತಹ ಘಟನೆಗಳನ್ನು ತಪ್ಪಿಸಲು ಪ್ರಶಾಂತ್ ನೀಲ್ ಕಠೀಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಶೂಟಿಂಗ್ ನ ಹಲವು ದೃಶ್ಯಗಳನ್ನು ವಿಡಿಯೋ ಮಾಡಿ ಹರಿಬಿಡಲಾಗಿತ್ತು. ಇದರಿಂದಾಗಿ ಸಿನಿಮಾದ ಗುಟ್ಟುಗಳು ರಟ್ಟಾಗಿದ್ದವು. ಹೀಗಾಗಿ ಚಿತ್ರದ ನಿರ್ದೇಶಕರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಸಲಾರ್ ಶೂಟಿಂಗ್ ಸೆಟ್ ಗೆ ಯಾರೇ ಬಂದರೂ , ಮೊಬೈಲ್ ತರದಂತೆ ನಿರ್ಬಂಧ ಹೇರಿದ್ದಾರೆ .