ಪ್ರಜ್ವಲ್-ರಚಿತಾ ನಟನೆಯ ‘ವೀರಂ’ ರಿಲೀಸ್ ಡೇಟ್ ಫಿಕ್ಸ್

Promotion

ಬೆಂಗಳೂರು, ಜನವರಿ 29, 2021 (www.justkannada.in): ನಾಯಕ ನಟ ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಜೋಡಿ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ‘ವೀರಂ’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಕುಮಾರ್ ರಾಜ್ ನಿರ್ದೇಶನದ ವೀರಂ ಸಿನಿಮಾ ಮೇ 6 ರಂದು ತೆರೆ ಕಾಣಲಿದೆ. ಶಶಿಧರ್ ಸ್ಟುಡಿಯೋ ಈ ಸಿನಿಮಾ ನಿರ್ಮಾಣ ಮಾಡಿದೆ.

ತಾರಾಗಣದಲ್ಲಿ ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ಖಳನಟರಾಗಿ ಚಿರಾಗ್ ಜಾನಿ ನಟಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ಮತ್ತು ಲವಿತ್ ಅವರ ಸಿನಿಮೆಟೊಗ್ರಫಿ ವೀರಂ ಸಿನಿಮಾಗಿದೆ.