ಪವರ್ ಸ್ಟಾರ್ ‘ಯುವರತ್ನ’ ಚಿತ್ರದ ಹೊಸ ಸ್ಟಿಲ್ ಬಿಡುಗಡೆ

ಬೆಂಗಳೂರು, ಮೇ 28, 2020 (www.justkannada.in): ಯುವರತ್ನ ಚಿತ್ರ ತಂಡ ಹೊಸ ಸ್ಟಿಲ್ ಬಿಡುಗಡೆ ಮಾಡಿದೆ.

‘ಪವರ್ ಆಫ್ ಯೂತ್’ ಹಾಡಿನ ಸ್ಟಿಲ್ ಒಂದನ್ನು ಬಿಡುಗಡೆ ಮಾಡಿದ್ದು, ಸಂತೋಷ್ ಆನಂದರಾಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಸ್ಟಿಲ್ ನಲ್ಲಿ ಅಪ್ಪು ಬಾಕ್ಸಿಂಗ್ ರಿಂಗ್‍ನಲ್ಲಿ ಸ್ಟೈಲಿಶ್ ಆಗಿ ನಿಂತಿದ್ದಾರೆ. ಹಿಂದೆ ಹಸಿರು ಬಣ್ಣದ ಲೈಟ್‍ಗಳಿದ್ದು, ಸಂಭ್ರಮಿಸುತ್ತಿರುವ ಭಂಗಿಯಲ್ಲಿ ಅಪ್ಪು ಪೋಸ್ ನೀಡಿದ್ದಾರೆ.