ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆ ಮಾಡುವ ವಿಚಾರ: ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಮಾ,20,2020(www.justkannada.in): ರಾಜ್ಯದಲ್ಲಿ  ಕೊರೋನಾ ವೈರಸ್ ಹರಡುವ ಭೀತಿ ಹಿನ್ನೆಲೆ ಮಾರ್ಚ್ 31ರವರೆಗೆ ಮದುವೆ ಸಭೆ ಸಮಾರಂಭಗಳು ಮಾಲ್ ಗಳು, ಥಿಯೇಟರ್ ಗಳನ್ನ ಬಂದ್ ಮಾಡಲಾಗಿದೆ. ಈ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡಿಕೆ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ.ಕೆ ಸುಧಾಕರ್,  ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಮಧ್ಯಾಹ್ನ ಶಿಕ್ಷಣ ಸಚಿವರೇ ಈ ಕುರಿತು ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂದೂಡುವ ವಿಚಾರ ಸಂಬಂಧ   ಈ ಬಗ್ಗೆ ಸಚಿವರ ಜತೆ ಮಾತನಾಡಿದ್ದೇವೆ.  ಅವರಿಗೆ ಕೆಲವು ಸಲಹೆಗಳನ್ನ ನೀಡಿದ್ದೇವೆ. ಶಿಕ್ಷಣ ಸಚಿವರೇ ಮಧ್ಯಾಹ್ನ ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

ಕೊರೋನಾ ಸೋಂಕಿನಿಂದ ಇಬ್ಬರು ಗುಣಮುಖರಾದ  ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್ , ಈ ಬಗ್ಗೆ ಮಾಹಿತಿ ಸಿಕ್ಕದ ಬಳಿಕ ತಿಳಿಸುತ್ತೇನೆ ಎಂದರು. ಹಾಗೆಯೇ  ಪ್ರಸ್ತುತ ವೈದ್ಯಕೀಯ ಸಿಬ್ಬಂದಿ ,ಪೊಲೀಸ್ ಸೇವೆ ಅಗತ್ಯವಾಗಿದೆ. ಹೀಗಾಗಿ ಅವರಿಗೆ ರಜೆ ನೀಡಲಾಗುವುದಿಲ್ಲ ಎಂದು ತಿಳಿಸಿದರು.

Key words: postponing – SSLC –examination- Minister -Dr K.Sudhakar -reaction