ಪಂಜಾಬ್ ವಿಧಾನಸಭೆ ಚುನಾವಣೆ ಮುಂದೂಡಿಕೆ.

ಪಂಜಾಬ್,ಜನವರಿ,17,2022(www.justkannada.in): ಫೆಬ್ರವರಿ 14ಕ್ಕೆ  ನಿಗದಿಯಾಗಿದ್ದ ಪಂಜಾಬ್​ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗ ಫೆಬ್ರವರಿ 20ಕ್ಕೆ ಮುಂದೂಡಿದೆ.

ಫೆಬ್ರವರಿ 16 ರಂದು ಗುರು ರವಿದಾಸ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಚುನಾವಣೆ  ಮುಂದೂಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಫೆಬ್ರವರಿ 16ರಂದು ಗುರು ರವಿದಾಸ ಜಯಂತಿ ಇರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಸಬಾರದು. ಯಾಕೆಂದರೆ ಪಂಜಾಬ್​ನಿಂದ ಅನೇಕ ಭಕ್ತರು ಉತ್ತರಪ್ರದೇಶದ ವಾರಾಣಸಿಗೆ ಹೋಗಬೇಕಾಗುತ್ತದೆ. ಸಿಖ್​ ಸಮುದಾಯದ ಭಕ್ತರು ಫೆ.10ರಿಂದಲೇ ವಾರಾಣಸಿಗೆ ಹೋಗಲು ಶುರು ಮಾಡುತ್ತಾರೆ ಎಂದು ಪಂಜಾಬ್​ ಮುಖ್ಯಮಂತ್ರಿ ಚರಣಜಿತ್​ ಸಿಂಗ್​ ಛನ್ನಿ, ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.

ಈ ಬಗ್ಗೆ ಚರ್ಚಿಸಲು ಇಂದು ಚುನಾವಣಾ ಆಯೋಗ ಸಭೆ ನಡೆಸಿತ್ತು. ಇದೀಗ ಪಂಜಾಬ್ ವಿಧಾನಸಭಾ ಚುನಾವಣೆಯನ್ನ ಫೆಬ್ರವರಿ 20ಕ್ಕೆ ಮುಂದೂಡಲಾಗಿದೆ. ಪಂಜಾಬ್ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

Key words: Postpone- Punjab –Assembly- elections