ಬೀದರ್ ನಗರಸಭೆ ಚುನಾವಣೆ ಮುಂದೂಡಿ: ಸಿಎಂ ಬಿಎಸ್ ವೈಗೆ ಶಾಸಕ ಬಂಡೆಪ್ಪ ಖಾಶೆಂಪುರ್ ಮನವಿ…

ಬೀದರ್, ಏಪ್ರಿಲ್,9,2021(www.justkannada.in): ಬೀದರ್ ನಗರದಲ್ಲಿ ಕೋವಿಡ್ – 19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಬೀದರ್ ನಗರ ಸಭೆ ಚುನಾವಣೆಯನ್ನು ಮುಂದೂಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್  ಅವರು ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.Illegally,Sand,carrying,Truck,Seized,arrest,driver

ಈಗಾಗಲೇ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದು, ಕೋವಿಡ್ – 19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಸಂಬಂಧ ತಾವು ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದಿರಿ. ಆ ಜಿಲ್ಲೆಗಳ ಪೈಕಿ ಬೀದರ್ ನಗರವು ಒಂದಾಗಿದ್ದು, ಕೋವಿಡ್- 19 ಮೊದಲನೇಯ ಅಲೆಗೆ ಹೋಲಿಕೆ ಮಾಡಿದರೆ ಬೀದರ್ ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ ಪ್ರತಿದಿನ 250ಕ್ಕೂ ಹೆಚ್ಚಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

Postpone- elections - Bidar Municipality-Bandeppa Khashempur- appeals - CM BS yeddyurappa
ಕೃಪೆ-internet

ಬೀದರ್ ಜಿಲ್ಲೆಯೂ ಮಹಾರಾಷ್ಟ್ರ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ನಮ್ಮ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರ ಸಭೆ ಚುನಾವಣೆ ನಡೆಸುವುದು ಸೂಕ್ತವೆನಿಸುತ್ತಿಲ್ಲ. ಆದ ಕಾರಣ ತಾವು ಸಾರ್ವಜನಿಕರ ಹಿತದೃಷ್ಠಿಯಿಂದ ನಗರ ಸಭೆ ಚುನಾವಣೆಯನ್ನು ಮುಂದೂಡಬೇಕೆಂದು ಪತ್ರದ ಮೂಲಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸಿಎಂ ಬಿಎಸ್ವೈಗೆ ಮನವಿ ಮಾಡಿದ್ದಾರೆ.

Key words: Postpone- elections – Bidar Municipality-Bandeppa Khashempur- appeals – CM BS yeddyurappa