ಆರ್.ಆರ್ ನಗರ ಕ್ಷೇತ್ರದಲ್ಲಿ ಕೊಲೆಗಳಾಗುವ ಸಾಧ್ಯತೆಯೂ ಇದೆ-ಸ್ಪೋಟಕ ಹೇಳಿಕೆ ನೀಡಿದ ಬಿಜೆಪಿ ಅಭ್ಯರ್ಥಿ ಮುನಿರತ್ನ…

Promotion

ಬೆಂಗಳೂರು,ಅಕ್ಟೋಬರ್,22,2020(www.justkannada.in): ಹೊರಗಿನಿಂದ ನಾಲ್ಕು ಸಾವಿರ ಜನ ಬಂದಿದ್ದಾರೆ. ಹಾಗೆಯೇ ಆರ್.ಆರ್ ನಗರ ಕ್ಷೇತ್ರದಲ್ಲಿ ಕೊಲೆಗಳಾಗುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಸ್ಪೋಟಕ ಹೇಳಿಕೆ ನೀಡಿದ್ದಾರೆ.jk-logo-justkannada-logo

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಿನ್ನೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದ್ದರು. ಹಾಗೆಯೇ ಮುನಿರತ್ನ ಬೆಂಬಲಿಗರ ವಿರುದ್ಧ ದೂರು ನೀಡಿದ್ದರು.

ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ. ಹೊರಗಿನಿಂದ ನಾಲ್ಕು ಸಾವಿರ ಜನ ಬಂದಿದ್ದಾರೆ. ಹೊರಗಿನಿಂದ ಬಂದವರು ಮತದಾರರ ಮಾಹಿತಿ ದಾಖಲೆ ಸಂಗ್ರಹಿಸುತ್ತಿದ್ದಾರೆ. ಈ ರೀತಿ ಯಾವತ್ತೂ ಕ್ಷೇತ್ರದಲ್ಲಿ ಆಗಿರಲಿಲ್ಲ. ಈ ಎಲೆಕ್ಷನ್ ನಲ್ಲಿ ವೈಯಕ್ತಿಕ ದ್ವೇಷ ಹೆಚ್ಚು ಕಂಡು ಬಂದಿದೆ.  ಹೊರಗಿನಿಂದ ಬಂದವರಿಂದ ಕ್ಷೇತ್ರದಲ್ಲಿ ಕೊಲೆ ಮಾಡುವ ಸಾಧ್ಯತೆ ಇದೆ. ಹೊರಗಿನಿಂದ ಬಂದವರು ಕೊಲೆ ಮಾಡುವವರೆಗೆ ಹೋಗಬೇಡಿ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ಸಮಸ್ಯೆಗಳಾಗುತ್ತದೆ ಎಂದು  ಹೇಳಿದ್ದಾರೆ.possibility-murders-rr-nagar-bjp-candidate-muniratna

ಇನ್ನು ನ್ಯಾಯಯುತ ಚುನಾವಣೆಗೆ ಸೇನಾಪಡೆ ಅವಶ್ಯಕ ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡುತ್ತೇನೆ. ಹೊರಗಿನಿಂದ ಬಂದವರು ಮತದಾರರ ದಾಖಲೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮ್ಮವರ ಮೇಲೆ ದೂರು ನೀಡಿದ್ದಾರೆ ಎಂದು ಮುನಿರತ್ನ ಆರೋಪಿಸಿದ್ದಾರೆ.

Key words: possibility – murders – RR nagar-BJP candidate -Muniratna