ಪಿಆರ್​ ಕೆ​ ಆಡಿಯೋ ಯೂಟ್ಯೂಬ್ ಚ್ಯಾನಲ್ ನಲ್ಲಿ  ಪಾಪ್ ಕಾರ್ನ್ ಮಂಕಿ ಟೈಗರ್…

ಬೆಂಗಳೂರು,ಜ,7,2020(www.justkannada.in): ವಿಭಿನ್ನ ಶಿರ್ಷಿಕೆಯಿಂದಲೆ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ ಗಾಂಧಿನಗರದ ಮಾಸ್​ ಚಿತ್ರ ಪಾಪ್​ಕಾರ್ನ್ ಮಂಕಿ ಟೈಗರ್.  ಈಗ ತೀವ್ರ ಕುತೂಹಲ ಹುಟ್ಟಿಸಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ತನ್ನ ಟ್ರೈಲರ್ ಮೂಲಕ ಅಭಿಮಾನಿಗಳ ಮನ ಸೆಳೆಯುತ್ತಿದೆ. ಒಂದು ಲಕ್ಷಕ್ಕೂ ಅಧಿಕ ವೀವ್ಸ್ ದಾಟಿರುವುದರ ಹಿಂದೆ ಡಾಲಿ ಧನಂಜಯ್ ಶ್ರಮ ಸೂರಿಯ ಖಡಕ್ ನಿರ್ದೇಶನವಿದೆ. ಅದರಂತೆ ನಾಯಕಿ ಸ್ಮಿತ ಹಾಗು ಡಾಲಿ ಜೊತೆಯಾಗಿ ಕಂಡಿಬರುವ ಅನೇಕ ಪಾತ್ರಗಳು ಕಥೆಯಲ್ಲಿ ಸೆಳೆದಿಡುವ ನೈಜತೆ ಹೊಂದಿದೆ. ಕೇವಲ ಟ್ರೈಲರ್ ಒಂದರ ಬಿಡುಗಡೆಯಿಂದಲೆ ಮೈ ಜುಮ್ಮೆನಿಸುವ ಈ ಪಾತ್ರಗಳು ತೆರೆಗಪ್ಪಳಿಸಿದರೆ ಅದರ ಎಫೆಕ್ಟ್ ಹೇಗಿರಬೇಕು? ಎನಿಸುತ್ತದೆ.

ದುನಿಯಾ ಖ್ಯಾತಿಯ ನಿರ್ದೇಶಕ ಸೂರಿ ಡಾಲಿ ಧನಂಜಯ್​ಗೆ ಹೇಳಿ ಮಾಡಿಸಿದ ಪಾತ್ರ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಅದಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ. ಸುಕ್ಕಾ ಸೂರಿಗೆ ಪಕ್ಕಾ ಲೋಕಲ್​ನಂತೆ ಧನಂಜಯ್ ನೀಡಿರುವ ಬಿಲ್ಡ್​ಅಪ್ ಸೀನ್ ಎಲ್ಲರಿಗೂ ಇಷ್ಟವಾಗಿದೆ.

ಆದರೆ  ಪಾಪ್​ಕಾರ್ನ್ ಮಂಕಿ ಟೈಗರ್ ಚಿತ್ರತಂಡ  ಹಿಂಸಾಚಾರದ ಸುತ್ತ ಹೆಣೆದಿರುವ ಕಥೆ ಎಂದು ಬರೆದುಕೊಂಡು  ಕಥಾನಾಯಕ ಹಾಗು ನಾಯಕಿ ಅನುಭವಿಸುವ ಘಟನೆ ಹಾಗು ಎದುರಿಸುವ ಸನ್ನಿವೇಶಳಿಂದ ಬದಲಾವಣೆಗಳು?  ಎಂಬುದನ್ನು ಪ್ರಶ್ನೆಯಾಗಿಗೆಯೆ ಉಳಿಸಿದೆ.

ಕಥಾನಾಯಕ ರಕ್ತದ ಮಡುವಿನಲ್ಲಿ ಬಿದ್ದು ಅಲ್ಲಲ್ಲಿ ಕ್ರೌರ್ಯ ಪ್ರದರ್ಶಿಸಿದರೆ, ನಾಯಕಿ ಸ್ಮಿತಾ ಕೂಡ ರಾ ಲುಕ್​ನಲ್ಲಿ ಮೇಕಪ್​ ಇಲ್ಲದೆ ರುದ್ರಿಯಂತೆ ಯಾರನ್ನೋ ಚಂಡಾಡುತ್ತಿದ್ದಾರೆ. ಇಡೀ ಕ್ರೈಮ್ ಬ್ಯಾಕ್​ಡ್ರಾಪ್  ಹಿಂದಿನ ಕಥೆಯನ್ನು ಟ್ರೈಲರ್​ನಲ್ಲಿ ಅನಾವರಣಗೊಳಿಸಿದರೂ ಕಥೆಯೇನು ಎಂಬುದನ್ನು ಸೂರಿ ಸಸ್ಪೆನ್ಸ್ ಆಗಿಯೇ ಇರಿಸಿದ್ದಾರೆ. ಇದೇ ಅವರ ಸ್ಪೆಷಾಲಿಟಿ.

ಪಿಎಮ್​ಟಿ ಗೆ   ಸುರೇಂದ್ರ ನಾಥ್ (ಸೂರಿ) ಕಥೆ ಬರೆದಿದ್ದು, ಸೂರಿ ಮತ್ತು ಅಮೃತ ಭಾರ್ಗವ್ ಸಂಭಾಷಣೆ ಬರೆದಿದ್ದಾರೆ. ಸೂರಿ ಅವರೇ ನಿರ್ದೇಶಿಸಿರೋ ಈ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದ್ದರೆ, ಶೇಕರ್ ಅವರ ಛಾಯಾಗ್ರಹಣವಿದೆ. ಸುಧೀರ್ ಕೆ.ಎಂ.ಅವರು ಚಿತ್ರದ ನಿರ್ಮಾಪಕರು. ಈಗಾಗಲೇ ಸಾಕಷ್ಟು ವಿಚಾರಗಳಿಂದ ಸಖತ್ ಸುದ್ದಿ ಮಾಡಿರೋ ಪಾಪ್ ಕಾರ್ನ್  ಮಂಕಿ ಟೈಗರ್ ಟೀಸರ್  ಹೊಸ ಅಲೆಯನ್ನೇಬಿಸೋ ಸೂಚನೆ ನೀಡಿದೆ.

Key words: Popcorn Monkey Tiger – PRK Audio –YouTube- Channel.