ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ‘ಕಳಪೆ’ ರೇಟಿಂಗ್ ಕೊಟ್ಟ ಐಸಿಸಿ

Promotion

ಬೆಂಗಳೂರು, ಮಾರ್ಚ್ 21, 2022 (www.justkannada.in):  ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಕಳಪೆ ಎಂದು ನಿರ್ಧರಿಸಿದೆ.

ಭಾರತ ಮತ್ತು ಶ್ರೀಲಂಕಾ ನಡುವಿನ 2ನೇ ಟೆಸ್ಟ್​ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಕಳಪೆ ಎಂದು ನಿರ್ಧರಿಸಿದೆ. ಕರ್ನಾಟಕದ ಜಾವಗಲ್​ ಶ್ರೀನಾಥ್​ ಅವರು ಪಿಚ್​ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ ರವಾನಿಸಿದ್ದಾರೆ.

ಹೊರ ಮೈದಾನದ ನಿರ್ವಹಣೆಯಲ್ಲಿ ಗುಣಮಟ್ಟ ಕಾಪಾಡದ ಹಿನ್ನೆಲೆಯಲ್ಲಿ 1 ಋಣಾತ್ಮಕ ಅಂಕ ಕೊಟ್ಟಿದೆ. ಪಂದ್ಯದ ರೆಫ್ರಿಯಾಗಿದ್ದ ಭಾರತ ತಂಡದ ಮಾಜಿ ಆಟಗಾರ, ಕರ್ನಾಟಕದ ಜಾವಗಲ್​ ಶ್ರೀನಾಥ್​ ಅವರು ಪಿಚ್​ ಗುಣಮಟ್ಟದ ವರದಿಯನ್ನು ಬಿಸಿಸಿಐಗೆ ರವಾನಿಸಿದ್ದಾರೆ.

2018ರಲ್ಲಿ ಐಸಿಸಿ ಪಿಚ್‌ ಗುಣಮಟ್ಟದ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಕಳಪೆ ಪಿಚ್‌ ಎಂದು ನೀಡಲಾಗುವ ಡೀಮೆರಿಟ್‌ ಅಂಕಗಳು 5 ವರ್ಷಗಳ ಕಾಲ ಉಳಿಯಲಿದೆ.