ನಾಲ್ಕು ದಿನಗಳ ಟೆಸ್ಟ್ ಐಸಿಸಿ ಕಲ್ಪನೆಗೆ ಪಾಂಟಿಂಗ್ ವಿರೋಧ

ಸಿಡ್ನಿ, ಜನವರಿ 06, 01, 2020 (www.justkannada.in): ಟೆಸ್ಟ್ ಪಂದ್ಯಗಳನ್ನು ಐದು ದಿನಗಳ ಬದಲಿಗೆ ನಾಲ್ಕು ದಿನಕ್ಕೆ ಸೀಮಿತಗೊಳಿಸುವ ಐಸಿಸಿ ಕಲ್ಪನೆಗೆ ಆಸ್ಟ್ರೇಲಿಯದ ಬ್ಯಾಟಿಂಗ್ ದಿಗ್ಗಜ ರಿಕಿ ಪಾಂಟಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ.

ಐಸಿಸಿ ಮುಂದಿನ 2023-2031ರ ಭವಿಷ್ಯದ ಕಾರ್ಯಕ್ರಮ ಪಟ್ಟಿಯಲ್ಲಿ ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳನ್ನು ಪರಿಚಯಿಸುವ ಕುರಿತು ಯೋಚಿಸಿತ್ತು.

ಟ್ವೆಂಟಿ-20 ಪಂದ್ಯಗಳಿಗೆ ಇನ್ನಷ್ಟು ದಿನಗಳನ್ನು ನೀಡುವ ಸಲುವಾಗಿ ಈ ನಿರ್ಧಾರಕ್ಕೆ ಬರಲಾಗಿತ್ತು. ಕ್ರಿಕೆಟ್ ಆಸ್ಟ್ರೇಲಿಯದ ಸಿಇಒ ಕೆವಿನ್ ರಾಬರ್ಟ್ಸ್‌ಸಹಿತ ಹಲವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಇದೀಗ ರಿಕಿ ಪಾಟಿಂಗ್, ಸಚಿನ್ ಸೇರಿದಂತೆ ಹಿರಿಯ ಕ್ರಿಕೆಟಿಗರು ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.