ಬಿಎಸ್ ವೈ ಕಾಲದಲ್ಲೇ ಜಿಂದಾಲ್ ಗೆ ಭೂಮಿ ನೀಡಿದ್ದು: ಕೈಗಾರಿಕೆಗೆ ಭೂಮಿ ನೀಡುವ ವಿಚಾರದಲ್ಲಿ ರಾಜಕೀಯ ಸಲ್ಲದು –ಗೃಹ ಸಚಿವ ಎಂ.ಬಿ ಪಾಟೀಲ್..

ಬೆಂಗಳೂರು,ಜೂ,15,2019(www.justkannada.in):  ಬಿ.ಎಸ್ ಯಡಿಯೂರಪ್ಪ ಅವರ ಕಾಲದಲ್ಲೇ ಜಿಂದಾಲ್ ಗೆ ಭೂಮಿ ನೀಡಲಾಗಿದೆ. ಹೀಗಾಗಿ ಕೈಗಾರಿಕೆಗೆ ಭೂಮಿ ನೀಡುವ ವಿಚಾರದಲ್ಲಿ ರಾಜಕೀಯ ಸಲ್ಲದು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಇಂದು ಮಾಧ್ಯಮದ ಜತೆ ಈ ಬಗ್ಗೆ ಮಾತನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್, ಎಲ್ಲವನ್ನ ಪರಿಶೀಲನೆ ಮಾಡಿ ಜಿಂದಾಲ್ ಗೆ ಭೂಮಿ ನೀಡಲು ಮುಂದಾಗಿದ್ದೇವೆ.  ಕೈಗಾರಿಕೆ ನೀತಿ ನಿಯಮಗಳ ಆಧಾರದ ಮೇಲೆ ಭೂಮಿ ದರ ನಿಗದಿ ಮಾಡಿ ಭೂಮಿ ನೀಡಲಾಗುತ್ತದೆ.  ಭೂಮಿ ನೀಡಲು  10 ವರ್ಷಗಳ ಕಾಲ  ಷರತ್ತು ಹಾಕಲಾಗುತ್ತದೆ. ಈ ವಿಚಾರದಲ್ಲಿ ರಾಜಕೀಯ ಸಲ್ಲದು. ಹೆಚ್.ಕೆ.ಪಿ ಸೇರಿದಂತೆ ಯಾರೂ ಸಹ ರಾಜಕೀಯ ಮಾಡಬಾರದು ಎಂದರು.

ಇನ್ನು ಐಎಂಎ ಸಂಸ್ಥೆಯಿಂದ ಕೋಟ್ಯಾಂತರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್, ಹಣಕಾಸು ವ್ಯವಹಾರ ಪೊಲೀಸ್ ಇಲಾಖೆ ವ್ಯಾಪ್ತಿಗೆ ಬರಲ್ಲ. ವಂಚನೆಯಾದರೇ ಮಾತ್ರ  ನಮ್ಮ ವ್ಯಾಪ್ತಿಗೆ ಬರುತ್ತದೆ. ತಮಿಳುನಾಡಿನಲ್ಲಿ ವಂಚನೆಯಾದಾಗ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಪೊಲೀಸ್ ಇಲಾಖೆಗೆ ಇದೆ.ರಾಜ್ಯದಲ್ಲಿ  ಇಂತಹ ಕಾನೂನು ಜಾರಿಗೆ ತರಲು ಮುಂದಾಗಿದ್ದೇವೆ. ಈ ಜವಾಬ್ದಾರಿಯನ್ನ ಮುಖ್ಯಕಾರ್ಯದರ್ಶಿ ಅವರಿಗೆ ವಹಿಸಿದ್ದೇವೆ ಎಂದು ಹೇಳಿದರು.

Key words: Political – jindal-land-Home Minister -MB Patil.