ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು:  ಅನರ್ಹತೆ ನೋಟಿಸ್ ಪ್ರಶ್ನಿಸಿ ಏಕನಾಥ್ ಸಿಂಧೆ ಅರ್ಜಿ ಸಲ್ಲಿಕೆ.

kannada t-shirts

ಮುಂಬೈ,ಜೂನ್,27,2022(www.justkannada.in): ಮಹಾರಾಷ್ಟ್ರದಲ್ಲಿ ಶಿವಸೇನೆ ಶಾಸಕರು ಬಂಡಾಯ ಏಳುವ ಮೂಲಕ ರಾಜಕೀಯ ಬಿಕ್ಕಟ್ಟು ಉಂಟಾಗಿದ್ದು ಇದೀಗ ಈ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಹೌದು,  ಮಹಾರಾಷ್ಟ್ರ  ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ನೀಡಿರುವ ಅನರ್ಹತೆಗೆ ಸಂಬಂಧಿಸಿದ ನೊಟೀಸ್​​ ಅನ್ನು ಪ್ರಶ್ನಿಸಿ ಏಕನಾಥ್ ಶಿಂಧೆ) ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಇಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಈ ಪೈಕಿ ಒಂದು ಅರ್ಜಿಯನ್ನು ಶಿಂದೆ ಸಲ್ಲಿಸಿದ್ದರೆ, ಮತ್ತೊಂದು ಅರ್ಜಿಯನ್ನು 15 ಭಿನ್ನಮತೀಯ ಶಾಸಕರ ಗುಂಪಿನ ಪರವಾಗಿ ಭರತ್ ಗೊಗಾವಾಲೆ ಸಲ್ಲಿಸಿದ್ದಾರೆ. ಬಂಡಾಯವೆದ್ದಿರುವ 16 ಶಾಸಕರಿಗೆ ಮಹಾರಾಷ್ಟ್ರದ ಶಾಸಕಾಂಗ ಸಚಿವಾಲಯವು ಸಮನ್ಸ್ ಜಾರಿ ಮಾಡಿದೆ. ಅವರಿಗೆ ನೀಡಿರುವ ಅನರ್ಹತೆ ನೊಟೀಸ್​ಗೆ ಜೂನ್ 27ರ ಒಳಗೆ ಉತ್ತರ ನೀಡಬೇಕು ಎಂದು ಡೆಪ್ಯುಟಿ ಸ್ಪೀಕರ್ ಸೂಚಿಸಿದ್ದಾರೆ.

Key words: political- crisis – Maharashtra – Supreme Court.

 

website developers in mysore