ಚಲುವರಾಯಸ್ವಾಮಿಯಿಂದ ರಾಜಕೀಯ ವ್ಯಭಿಚಾರದ ಕೆಲಸ: ಮೈತ್ರಿ ಅಭ್ಯರ್ಥಿ ಸುಮಲತಾ ಪರ ಹಣ ಹಂಚಿಕೆ-ಶಾಸಕ ಸುರೇಶ್ ಗೌಡ ಗಂಭೀರ ಆರೋಪ….

ಮಂಢ್ಯ,ಮೇ,10,2019(www.justkannada.in):  ಮಾಜಿ ಶಾಸಕ ಚಲುವರಾಯಸ್ವಾಮಿ  ಮೈತ್ರಿ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಿ ಹಣ ಹಂಚಿದ್ದಾರೆ. ಅವರಿಂದ ರಾಜಕೀಯ ವ್ಯಭಿಚಾರದ ಕೆಲಸ ನಡೆದಿದೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ.

 ಮಾಧ್ಯಮದ ಜತೆ ಮಾತನಾಡಿ ಮಾಜಿ ಶಾಸಕ ಚಲುವರಾಯಸ್ವಾಮಿ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಶಾಸಕ ಸುರೇಶ್ ಗೌಡ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್  ಗೆದ್ದರೇ ರಾಹುಲ್ ಗಾಂಧಿ ಪ್ರಧಾನಿ ಮಾಡುತ್ತಿದ್ದೆವು. ಆದರೆ ಅವರು ಸುಮಲತಾರನ್ನ ಬೆಂಬಲಿಸಿ ಮೋದಿಯವರನ್ನು ಪ್ರಧಾನಿ ಮಾಡಲು ಮುಂದಾಗಿದ್ದಾರೆ. ಹೀಗಿರುವಾಗ ಚೆಲುವರಾಯಸ್ವಾಮಿ ಹೇಗೆ ಕಾಂಗ್ರೆಸ್ಸಿನವರಾಗುತ್ತಾರೆ ಎಂದು ಪ್ರಶ್ನಿಸಿದರು. ಮೈತ್ರಿ ಅಭ್ಯರ್ಥಿಯ ಪರವಾಗಿ ಅವರನ್ನು ಪ್ರಚಾರಕ್ಕೆ ಕರೆಯುವ ಅವಶ್ಯಕತೆ ಇರಲಿಲ್ಲ. ಒಂದೇ ಕ್ಷೇತ್ರದವರಾದರೂ ನಾನು ಯಾವುದೇ ಕಾರಣಕ್ಕೂ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಸುರೇಶ್ ಗೌಡ ಹೇಳಿದ್ದಾರೆ.

 ಚೆಲುವರಾಯಸ್ವಾಮಿ ನಮಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾನೆ. ಆತನನ್ನ ನನಗೆ ಕಂಡರೇ ದ್ವೇಷ. ಆತ ದುಷ್ಟ ಹೀಗಾಗಿ ಅವರೊಂದಿಗೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಸುಮಲತಾ ಅಂಬರೀಶ್ ಅವರನ್ನು ಯಡಿಯೂರಪ್ಪ ಮನೆಗೆ ಕಳುಹಿಸಿದ್ದವರು ಯಾರು. ಬೆಂಗಳೂರಿನಲ್ಲಿ ಸಂದೇಶ್ ಪ್ರಿನ್ಸ್ ನಲ್ಲಿ ಸಭೆ ನಡೆಸಿದ್ದು ಯಾರು..?  ಎಂದು ಚಲುವರಾಯಸ್ವಾಮಿ ವಿರುದ್ದ ಹರಿಹಾಯ್ದರು.

Key words: Political- adultery-work – Chaluvaraswamy-JDS- MLA- Suresh Gowda