ಹೈದರಾಬಾದ್ ಬಂಜಾರ ಹಿಲ್ಸ್ ಪಬ್ ಮೇಲೆ ಪೊಲೀಸ ದಾಳಿ: ಸಿಕ್ಕಿಬಿದ್ದ ಸೆಲೆಬ್ರೆಟಿಗಳು !

Promotion

ಬೆಂಗಳೂರು, ಏಪ್ರಿಲ್ 03, 2022 (www.justkannada.in): ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿ ಪಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಹಲವು ಸೆಲೆಬ್ರೆಟಿಗಳು ಸಿಕ್ಕಿಬಿದ್ದಿದ್ದಾರೆ.

‘ಬಿಗ್ ಬಾಸ್’ ವಿಜೇತ, ಟಾಲಿವುಡ್ ಗಾಯಕ ರಾಹುಲ್ ಸಿಪ್ಲಿಗುಂಜ್ ಹಾಗೂ ಹಲವು ಪ್ರಮುಖರ ಮಕ್ಕಳು ಸೇರಿದಂತೆ 150 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಅಂದಹಾಗೆ ಬಾಲಿವುಡ್ ಸೆಲೆಬ್ರಿಟಿಗಳು ಹೆಚ್ಚಾಗಿ ಭಾಗವಹಿಸುವ ಹೈದರಾಬಾದ್ ಬಂಜಾರ ಹಿಲ್ಸ್ ಪ್ರದೇಶದ ಫುಡ್ಡಿಂಗ್ ಅಂಡ್ ಮಿಂಕ್ ಪಬ್ ಮೇಲೆ ದಾಳಿ ನಡೆಸಲಾಗಿದೆ.

ಬೆಳಗಿನ ಜಾವ 3 ಗಂಟೆಗೆ ದಾಳಿ ನಡೆಸಿದ್ದು, 33 ಯುವತಿಯರು ಸೇರಿದಂತೆ 150 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮತ್ತಿನಲ್ಲಿದ್ದ ಯುವಕರು ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ್ದಾರೆ.