ಮೈಸೂರಿಗೆ  ಪ್ರಧಾನಿ ಮೋದಿ ಆಗಮನ ಹಿನ್ನೆಲೆ: ರೈಲು ಸಂಚಾರದಲ್ಲಿ ವ್ಯತ್ಯಯ.

ಮೈಸೂರು,ಜೂನ್,20,2022(www.justkannada.in): ವಿಶ್ವ ಯೋಗ ದಿನಾಚಾರಣೆಯಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಇಂದು ಮೈಸೂರು -ಚಾಮರಾಜನಗರ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಇಂದು ಸಂಜೆ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ಪಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು -ಚಾಮರಾಜನಗರ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಮೈಸೂರು -ಚಾ. ನಗರ ರೈಲು ಮಾರ್ಗದ ರೈಲ್ವೆ ಹಳಿ ಮಹಾರಾಜ ಕಾಲೇಜು ಮೈದಾನದ ಹಿಂಭಾಗ  ಹಾದುಹೋಗಿದೆ. ಹೀಗಾಗಿ ಸಂಜೆ 6.40ಕ್ಕೆ ಮೈಸೂರಿನಿಂದ ಚಾಮರಾಜ ನಗರಕ್ಕೆ ಹೋಗುವ ರೈಲು ತಡವಾಗಿ ಸಂಚಾರ ನಡೆಸಲಿದೆ. ಚಾಮರಾಜನಗರದಿಂದ ಮೈಸೂರಿಗೆ ಬರುವ ರೈಲು ಸಹ ವಿಳಂಬವಾಗಲಿದೆ. ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿದ ನಂತರ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ.

Special express –train- service -between -Dadar - Mysore
ಕೃಪೆ-internet

ಚಾಮರಾಜ ನಗರದಿಂದ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಬರುವ ರೈಲು, ಅಶೋಕ್ ಪುರಂ ನಿಂದ ಮೈಸೂರು ಜಂಕ್ಷನ್ ಗೆ  ಮೋದಿ ಕಾರ್ಯಕ್ರಮ ಮುಗಿದ ಬಳಿಕ ಆಗಮಿಸಲಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ ರೈಲ್ವೆ ಆಧಿಕಾರಿಗಳು ಮನವಿ ಮಾಡಿದ್ದಾರೆ.

Key words: PM Modi- visit – Mysore-rail -traffic.