‘ಅಟಲ್ ಸುರಂಗ’ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ….

ಶಿಮ್ಲಾ,ಅಕ್ಟೋಬರ್,3,2020(www.justkannada.in): ವಿಶ್ವದ ಅತಿ ದೊಡ್ಡ ಹೆದ್ಧಾರಿ ಸುರಂಗವಾದ ಅಟಲ್ ಸುರಂಗವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಾರ್ಪಣೆಗೊಳಿಸಿದರು.jk-logo-justkannada-logo

ಮನಾಲಿ-ಲೇಹ್ ನಡುವೆ ಸಂಪರ್ಕ ಕಲ್ಪಿಸುವ 9 ಕಿಲೋಮೀಟರ್ ಉದ್ಧದ ಅಟಲ್ ಸುರಂಗ ಮಾರ್ಗವನ್ನು  ಟೇಪ್ ಕತ್ತರಿಸುವ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾಣೆ ಉಪಸ್ಥಿತರಿದ್ದರು.

ಹಿಮಾಚಲ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ಸುರಂಗ ಮಾರ್ಗವೂ ಲೇಹ್​ ಮತ್ತು ಮನಾಲಿ ನಡುವೆ ಸುಮಾರು 46 ಕಿ.ಮೀ ಅಂತರವನ್ನು ತಗ್ಗಿಸಲಿದೆ.

pm-modi-innugrate-atal-tunnel-himachal-pradesh

 ಭಾರೀ ಹಿಮಪಾತವಾದಾಗ ಪ್ರತಿವರ್ಷ ಆರು ತಿಂಗಳ ಕಾಲ ಕಣಿವೆಯನ್ನು ನಿರ್ಬಂಧಿಸಲಾಗುತ್ತಿತ್ತು. ಇದೀಗ ಅಟಲ್ ಸುರಂಗ ಮೂಲಕ ವರ್ಷ 365 ದಿನವೂ ಅಲ್ಲಿ ಪ್ರಯಾಣಿಸಬಹುದಾಗಿದೆ.  ಅಟಲ್​ ಸುರಂಗವನ್ನು ನಿರ್ಮಿಸುವ ತೀರ್ಮಾನವನ್ನು 2000, ಜೂನ್​ 3ರಂದು ಅಂದಿನ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡಿದ್ದರು. 2002, ಮೇ 26ರಂದು ಸುರಂಗ ಮಾರ್ಗಕ್ಕೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು.

Key words: PM Modi- innugrate- Atal Tunnel-himachal pradesh