ಸಸಿಗಳನ್ನ ನೆಡುವ ಮೂಲಕ ಮೈಸೂರುವಿವಿ ಮತ್ತು ಅಪೋಲೋ ಬಿಜಿಎಸ್ ಹಾಸ್ಟಿಟಲ್  ವತಿಯಿಂದ ‘ವಿಶ್ವಪರಿಸರ ದಿನಾಚಾರಣೆ’.

ಮೈಸೂರು,ಜೂನ್,5,2021(www.justkannada.in): ಸ್ವಾಭಾವಿಕ ಆಮ್ಲಜನಕವನ್ನು ಉತ್ಪಾದಿಸುವ ಸಸಿಗಳನ್ನು ನೆಡುವ ಮೂಲಕ ಮೈಸೂರು ವಿಶ್ವ ವಿದ್ಯಾನಿಲಯ ಮತ್ತು ಅಪೋಲೋ ಬಿಜಿಎಸ್ ಹಾಸ್ಟಿಟಲ್  ವತಿಯಿಂದ ವಿಶ್ವಪರಿಸರ ದಿನಾಚಾರಣೆ ಆಚರಿಸಲಾಯಿತು.

ವಿಶ್ವಪರಿಸರ ದಿನ ಹಿನ್ನೆಲೆ ಪರಿಸರ ವ್ಯವಸ್ಠೆ ಮತ್ತು ಪುನರ್‍ ಸ್ಥಾಪನೆ ಎಂಬುದು ಈ ವರ್ಷದ ವಿಷಯವಾಗಿದೆ. ಸಾಂಕ್ರಾಮಿಕ ರೋಗದ ನಡುವೆಯು ಆಮ್ಲಜನಕದ ಅಗತ್ಯತೆಯನ್ನು ಅರಿತು ಪರಿಸರ ದಿನದ ಅಂಗವಾಗಿ ಅಸ್ಪತ್ರೆಯ ವತಿಯಿಂದ ಸ್ವಾಭಾವಿಕ ಆಮ್ಲಜನಕವನ್ನು ಉತ್ಪಾದಿಸುವ ಸಸಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಅವರಣದಲ್ಲಿ ನೆಡಲಾಯಿತು.

ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್,  ಅಸ್ಪತ್ರೆಯ ವೈದ್ಯಧಿಕಾರಿಗಳು, ದಾದಿಯರು ಮತ್ತು ಅಸ್ಪತ್ರೆಯ ಸಹಾಯಕ ಸಿಬ್ಬಂದಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೇರವೇರಿತು.

ಕಾರ್ಯಕ್ರಮದಲ್ಲಿ ವಾದ್ವ-ಮುಖ್ಯ ವೈದ್ಯಧಿಕಾರಿಗಳು ಹಾಗೂ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ರಾಜ್‍ಕುಮಾರ್ , ಶಸ್ತ್ರಾಚಿಕಿತ್ಸಕರಾದ ಡಾ.ಶ್ರೀನಾಧ್ ಎಸ್ , ವೈದ್ಯಧಿಕಾರಿಗಳಾದ . ಡಾ.ಸಂಜೀವ್ ರಾವ್ ಗಿರಿಮಜಿ,  ಸಹಾಯಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words: planting -Mysore university- Apollo BGS Hospital- World Environment Day.