ಎಲ್ಲ ಕ್ರೀಡಾಂಗಣಗಳಲ್ಲಿ ಪಿಂಕ್ ಬಾಲ್ ಟೆಸ್ಟ್: ಸೌರವ್ ಗಂಗೂಲಿ

ಮುಂಬೈ, ನವೆಂಬರ್ 25, 2019 (www.justkannada.in): ಸೌರವ್ ಗಂಗೂಲಿ ಪಿಂಕ್ ಬಾಲ್ ಪಂದ್ಯದ ಮುಂದಿನ ಯೋಜನೆ ಬಗ್ಗೆ ಮಾತನಾಡಿದ್ದಾರೆ.

ಈ ಯಶಸ್ಸು ಕೇವಲ ಕೋಲ್ಕತ್ತಾದ ಯಶಸ್ಸಲ್ಲ. ಇದು ಇಡೀ ದೇಶದ ಯಶಸ್ಸು ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕ್ರೀಡಾಂಗಣಗಳಲ್ಲೂ ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪ್ರೇಕ್ಷಕರ ಕೊರತೆ ಸಾಕಷ್ಟಿದೆ. ತುಂಬಾ ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಟೆಸ್ಟ್‌ ಪಂದ್ಯಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಆದರೆ ಈ ಪಂದ್ಯ ಟೆಸ್ಟ್‌ ಪಂದ್ಯ ಅತ್ಯುನ್ನತ ಪ್ರೇಕ್ಷಕ ವರ್ಗವನ್ನು ಹೊಂದಿದ್ದ ಸಂದರ್ಭವನ್ನು ನೆನಪಿಸಿದೆ.

ಕೇವಲ ಈಡನ್ ಗಾರ್ಡನ್ ಮಾತ್ರವಲ್ಲ ದೇಶದ ಎಲ್ಲಾ ಕ್ರೀಡಾಂಗಣಗಳಲ್ಲೂ ಅಹರ್ನಿಶಿ ಪಂದ್ಯವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುತ್ತೆ ಎಮದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.