ಕೋವಿಡ್ ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ನಿರ್ಬಂಧ ಕೋರಿ ಸಲ್ಲಿಸಿದ್ಧ ಪಿಐಎಲ್ ಇತ್ಯರ್ಥಪಡಿಸಿದ ಕೋರ್ಟ್…

ಬೆಂಗಳೂರು,ಮೇ,12,2021(www.justkannada.in):  ಕೋವಿಡ್ ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ನಿರ್ಬಂಧ  ಹೇರುವಂತೆ ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ಹೈಕೋರ್ಟ್ ಇತ್ಯರ್ಥಪಡಿಸಿದ್ದು, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ.jk

ಕೋವಿಡ್ ನಿಂದ ಸಾವನ್ನಪ್ಪುವ ದೃಶ್ಯಗಳಿಗೆ ನಿರ್ಬಂಧ ಹೇರುವಂತೆ ಕೋರಿ ಲೆಟ್ಸ್ ಕಿಟ್ ಫೌಂಡೇಶನ್  ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿತ್ತು. ಮಾಧ್ಯಮಗಳು ಜೀವಭಯದ ಫೋಬಿಯಾ ಹುಟ್ಟಿಸುತ್ತಿವೆ.  ಕೋವಿಡ್ ನಿಂದ ನರಳುವ ಸಾವಿನ ದೃಶ್ಯ ಪ್ರಸಾರ ಮಾಡುತ್ತಿವೆ. ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಇದು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿದೆ.

ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರಿಂದಾಗಿ ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸಬಹುದು. ಹೀಗಾಗಿ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಕಾಯ್ದೆಯಡಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲು  ಮನವಿ ಮಾಡಿತ್ತು.pil-court-appeal-restrictions-death-scenes-covid

ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಸಿಜೆ ಎಎಸ್ ಒಕಾ ನೇತೃತ್ವದ ವಿಭಾಗೀಯ ಪೀಠ, ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚನೆ ನೀಡಿತು. ವೀಕ್ಷಕರು ಚಾನಲ್ ಬದಲಿಸುವ ಆಯ್ಕೆಯೂ ಇದೆ. ಬೇರೆ ಉತ್ತಮವಾದುದ್ದನ್ನು ವೀಕ್ಷಿಸಲು ಚಾನಲ್ ಬದಲಿಸಬಹುದು  ಎಂದು ಪೀಠ ಅಭಿಪ್ರಾಯ ಪಟ್ಟಿದೆ.

Key words: PIL –Court – Appeal – restrictions -death scenes -covid.