ಫೋನಿ ಚಂಡಮಾರುತ ಎಫೆಕ್ಟ್: ಮೈಸೂರಿನಿಂದ ತೆರಳಬೇಕಿದ್ದ ಎರಡು ರೈಲುಗಳ ಸಂಚಾರ ಸ್ಥಗಿತ…

ಮೈಸೂರು,ಮೇ,3,2019(www.justkannada.in):  ಒಡಿಶಾ, ಪಶ್ಚಿಮಾ ಬಂಗಾಳದಲ್ಲಿ ಅಬ್ಬರಿಸುತ್ತಿರುವ ಫೋನಿ ಚಂಡಮಾರುತ ಎಫೆಕ್ಟ್ ಹಿನ್ನೆಲೆ ಮೈಸೂರಿನಿಂದ ತೆರಳಬೇಕಿದ್ದ ಎರಡು ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ನಿನ್ನೆಯಿಂದ ಪಶ್ಚಿಮ ಬಂಗಾಳ, ಒರಿಸ್ಸಾ ಸೇರಿದಂತೆ ಹಲವೆಡೆ ಫೋನಿ  ಚಂಡಮಾರುತ ಉಂಟಾಗಿದ್ದು ಈ ಹಿನ್ನೆಲೆ ರೈಲು ಸಂಚಾರಕ್ಕೆ ಅಡ್ಡಿಯಾಗುವ ಹಿನ್ನೆಲೆ ಮೈಸೂರಿನಿಂದ ಹೊರಡುವ 2ರೈಲುಗಳನ್ನ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ. ಮೈಸೂರಿನಿಂದ ಪಶ್ಚಿಮ ಬಂಗಾಳದ  ಹೌರಾಗೆ ತೆರಳಬೇಕಿದ್ದ  ಹೌರಾ ಎಕ್ಸ್ಪ್ರೆಸ್  ರೈಲು ಸಂಚಾರ ಸ್ಥಗಿತಗೊಂಡಿದೆ.

ಪ್ರತಿದಿನ ಮೈಸೂರು ರೈಲ್ವೆ ನಿಲ್ದಾಣದಿಂದ ಪಶ್ಚಿಮ ಬಂಗಾಳದ ಹೌರಾ ಗೆ ಹಾಗೂ ಒರಿಸ್ಸಾ ಗೆ ತೆರಳುತ್ತಿದ್ದ  ರೈಲುಗಳನ್ನ  2ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ . ಫೋನಿ ಚಂಡಮಾರುತ ಅಬ್ಬರಕ್ಕೆ ಈಗಾಗಲೇ ಒಡಿಶಾದಲ್ಲಿ ಐವರು ಸಾವನ್ನಪ್ಪಿದ್ದು ಹಾನಿ ಸಂಭವಿಸಿದೆ. ಫೋನಿ ಸೈಕ್ಲೋನ್ ಎಫೆಕ್ಟ್ ಆಂಧ್ರ ಪ್ರದೇಶ ಮತ್ತು ತಮಿಳುನಾಡಿಗೂ ತಟ್ಟಿದೆ. ಆದರೆ ಕರ್ನಾಟಕಕ್ಕೆ ಫೋನಿ ಎಫೆಕ್ಟ್  ಆಗಿಲ್ಲ.

Key words: Phony – Cyclone-Effect- Canceled-two trains – leave -Mysore.