ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ.

ನವದೆಹಲಿ,ಏಪ್ರಿಲ್,4,2022(www.justkannada.in):  ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು ಇಂದು ಸಹ ತಲಾ 40 ಪೈಸೆ ದರ ಏರಿಕೆಯಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸೋಮವಾರ ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ತಲಾ 40 ಪೈಸೆ ಏರಿಸಿವೆ. ಇದರೊಂದಿಗೆ 14 ದಿನದಲ್ಲಿ 12ನೇ ಸಲ ಒಟ್ಟು 8.40 ರೂ. ತುಟ್ಟಿಯಾದಂತಾಗಿದೆ.

ನಾಲ್ಕೂವರೆ ತಿಂಗಳ ವಿರಾಮದ ನಂತರ ಮಾ.22ರಂದು ಮೊದಲ ಬಾರಿಗೆ ಉಭಯ ಇಂಧನಗಳ ಬೆಲೆ ಏರಿಸಲಾಗಿತ್ತು. ನಂತರ ನಿರಂತರವಾಗಿ ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 109,41  ರೂ, ಹಾಗೂ ಡೀಸೆಲ್ ಬೆಲೆ 93.23 ರೂ ಆಗಿದೆ. ಹಾಗೆಯೇ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.81,  ಡೀಸೆಲ್ ಬೆಲೆ 95.07 ಆಗಿದೆ.

Key words: Petrol-diesel -price -hike -again

ENGLISH SUMMARY…

Fuel prices increased yet again
New Delhi, April 4, 2022 (www.justkannada.in): Prices of fuel are increasing constantly in the country over the last few days. Accordingly, it has increased by Re.0.40 paise today again.
Government-owned fuel companies have increased the price of fuel both petrol and diesel by Re. 0.40 paise. Accordingly, the prices of fuel have been increased 12 times in the last 14 days, and the total increase is Rs. 8.40.
The prices of both petrol and diesel were increased on March 22 for the first time after a gap of four-and-a-half months. From then onwards the prices are increasing every day. The price of one liter of petrol in Bengaluru today is Rs. 109.41 and diesel Rs.93.23. The price of petrol in Delhi is Rs. 103.81 and diesel Rs.95.07.
Keywords: Fuel prices/ increased/ constantly