ಏಕಕಾಲದಲ್ಲೇ ಅನ್ನನಾಳ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಹೊಂದಿದ್ದ ವ್ಯಕ್ತಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ..

kannada t-shirts

ಬೆಂಗಳೂರು,ಜೂನ್,22,2021(www.justkannada.in):  ಏಕಕಾಲದಲ್ಲೇ ಅನ್ನನಾಳ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಹೊಂದಿದ್ದ 74 ವರ್ಷದ ವ್ಯಕ್ತಿಗೆ ರೋಬೋಟ್ ಸಹಾಯದ ಮೂಲಕ  ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದು ವಿಶ್ವದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದು ಎನ್ನಲಾಗಿದೆ.jk

ಹೌದು, ಬಹುವಿಭಾಗಿ ವೈದ್ಯರುಗಳಾದ ಆಂಕೋಲಜಿ ಮತ್ತು ಹೆಮಟೋ ಆಂಕೋಲಾಜಿ, ಫೊರ್ಟಿಸ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ನಿರ್ದೇಶಕಿ ಡಾ.ನೀತಿ ರೈಝಾದ, ಮೂತ್ರಶಾಸ್ತ್ರ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿ ಹಿರಿಯ ಸಲಹೆಗಾರ ಡಾ. ಮನೀಶ್ ಜೋಶಿ ಇವರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ.

ಆಘ್ಘಾನಿಸ್ತಾ ಮೂಲದ 74 ವರ್ಷದ ಇಳಿವಯಸ್ಸಿನ ವ್ಯಕ್ತಿಗೆ ಪ್ರಾರಂಭದಲ್ಲಿ ಆಹಾರ ಸೇವನೆ ಕಷ್ಟವಾದ್ದರಿಂದ ಆಸ್ಪತ್ರೆಗೆ ದಾಖಲಾದರು. ಆ ಬಳಿಕ ಅವರಿಗೆ ಅನ್ನನಾಳದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ವಿವಿಧ ಪರೀಕ್ಷೆಗಳ ನಂತರ ಅವರಿಗೆ ಎಡ ಮೂತ್ರಪಿಂಡದಲ್ಲಿಯೂ ಗಡ್ಡೆಯೊಂದಿಗೆ “ಓಸೋಪೇಜಿಲ್ ಕ್ಯಾನ್ಸರ್” ಇರುವುದು ತಿಳಿದು ಬಂದಿತು. ಇದು ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದೆ.  ಸಾಮಾನ್ಯವಾಗಿ ಒಮ್ಮೆಲೆ ಎರಡೂ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುವುದೇ ಅಪರೂಪದ ಪ್ರಕರಣವಾಗಿದೆ. ಎರಡು ರೀತಿಯ ಕ್ಯಾನ್ಸರ್ ಇರುವ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಿದರೂ ಬದುಕುವ ಸಾಧ್ಯತೇ ಶೇ.90ರಷ್ಟು ಕಡಿಮೆ.

ಈ ವ್ಯಕ್ತಿಗೆ ಅನ್ನನಾಳ ಹಾಗೂ ಮೂತ್ರಪಿಂಡದಲ್ಲಿ ಕ್ಯಾನ್ಸರ್ ಇದ್ದ ಕಾರಣ ಕಿಮೋರೇಡಿಯೇಶನ್ ಚಿಕಿತ್ಸೆಯಿಂದ ಪ್ರಾರಂಭಿಸಿ, ನಂತರದಲ್ಲಿ ರೋಬೋಟ್ ನೆರವಿನ ಮೂಲಕ ಏಕಕಾಲದಲ್ಲಿಯೇ ಎರಡೂ ಶಸ್ತ್ರಚಿಕಿತ್ಸೆ ನಡೆಸಲಾಯಿತು. ವಯಸ್ಸಾದ ಕಾರಣ ಇವರಿಗೆ ಒಂದು ಶಸ್ತ್ರಚಿಕಿತ್ಸೆ ನಡೆಸುವುದೇ ಅಪಾಯಕಾರಿ. ಅದರಲ್ಲೂ ಎರಡೆರಡು ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವೇ ಆಗಿತ್ತು ಎಂದು ಕ್ಯಾನ್ಸರ್ ಸಂಸ್ಥೆ ವೈದ್ಯಕೀಯ ಆಂಕೋಲಕಜಿ ಮತ್ತು ಹೆಮಟೋ ಆಂಕೋಲಜಿ ನಿರ್ದೇಶಕ ಡಾ.ನಿತಿ ರೈಜಾಡಾ ಹೇಳುತ್ತಾರೆ.

Key words: person – kidney cancer-Successful -surgery – Fortis Hospital -Physician Team.

website developers in mysore