ಉಡುಪಿಯ ಮರವಂತೆ ಬೀಚ್’ನಲ್ಲಿಸಮುದ್ರಕ್ಕುರುಳಿದ: ಯುವಕ ಸಾವು

Promotion

ಬೆಂಗಳೂರು, ಜುಲೈ 03, 2022 (www.justkannada.in): ಉಡುಪಿ ಜಿಲ್ಲೆ ಬೈಂದೂರು ತಾಲೂಕು ವ್ಯಾಪ್ತಿಯ ಮರವಂತೆ ಬೀಚ್​ನಲ್ಲಿ ಸಮುದ್ರದಲ್ಲಿ ಕಾರು ಉರುಳಿ ಓರ್ವ ಮೃತಪಟ್ಟಿದ್ದಾನೆ.

ಕೋಟೇಶ್ವರ ಗ್ರಾಮದ ನಿವಾಸಿ   ವೀರಾಜ್ ಆಚಾರ್ಯ(28) ಮೃತಪಟ್ಟವರು.

ನಾಲ್ವರು ಕಾರಿನಲ್ಲಿ ತೆರಳಿದ್ದರು. ಈ ಸಮಯದಲ್ಲಿ ಮರವಂತೆ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಿಂದ ಸಮುದ್ರ ಒಳಗೆ ಕಾರು ನುಗ್ಗಿದೆ. ಸಮುದ್ರದ ಅಲೆಗಳ ರಭಸಕ್ಕೆ ಕಾರು ಕೊಚ್ಚಿಹೋಗಿ ಈ ಘಟನೆ ಸಂಭವಿಸಿದೆ.

ಈ ನಡುವೆ ಬೈಂದೂರು ಅಗ್ನಿಶಾಮಕ ದಳದವರು ಕಾರಿನ ಹಿಂಬದಿ ಸೀಟ್​ನಲ್ಲಿದ್ದ ಇಬ್ಬರ ರಕ್ಷಣೆ ಮಾಡಿದ್ದಾರೆ.

ಸಮುದ್ರಪಾಲಾದ ಓರ್ವನಿಗಾಗಿ ಹುಡುಕಾಟ ನಡೆದಿದೆ. ಸಮುದ್ರ ಅಲೆಗಳ ಅಬ್ಬರದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.