‘ರಾಬರ್ಟ್’ ಡಿ ಬಾಸ್ ಫ್ಯಾನ್ಸ್ ಹೋರಾಟ: ಲಿಂಕ್ ಹಂಚುತ್ತಿದ್ದ ವ್ಯಕ್ತಿ ಅಂಧರ್

ಬೆಂಗಳೂರು, ಮಾಚ್‍ 14, 2021 (www.justkannada.in): ರಾಬರ್ಟ್ ಸಿನಿಮಾ ಪೈರಸಿ ಮಾಡುತ್ತಿದ್ದ ಆರೋಪಿಯನ್ನು ದರ್ಶನ್ ಅಭಿಮಾನಿಗಳೇ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ.

ಪೈರಸಿ ಕುರಿತು ಉಮಾಪತಿ ಫಿಲ್ಮ್ ವ್ಯವಸ್ಥಾಪಕ ಮಂಜುನಾಥ ನೀಡಿದ ದೂರಿನ ಅನ್ವಯ ಆರೋಪಿ ವಿಶ್ವನಾಥ್​ನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವಿಶ್ವನಾಥ್ ರಾಬರ್ಟ್ ಚಿತ್ರದ ಲಿಂಕ್ ಶೇರ್ ಮಾಡುತ್ತಿದ್ದ. ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್​ ಹಂಚಿಕೆ ಮಾಡುತ್ತಿದ್ದ ಎನ್ನಲಾಗಿದೆ.

ಎಚ್​ಡಿ ಪ್ರಿಂಟ್ ಪಡೆಯುವ ಸೋಗಿನಲ್ಲಿ ದರ್ಶನ್​ ಅಭಿಮಾನಿಗಳು ಆರೋಪಿಯನ್ನು ಸೆರೆಹಿಡಿದಿದ್ದಾರೆ. ಶನಿವಾರವಷ್ಟೇ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಒಬ್ಬ ಆರೋಪಿಯನ್ನು ಅಭಿಮಾನಿಗಳು ಹಿಡಿದುಕೊಟ್ಟಿದ್ದರು.