ರಾಯಚೂರಿನ ಜನರು ತಮ್ಮ ಜಿಲ್ಲೆಯನ್ನು ತೆಲಂಗಾಣ ದೊಂದಿಗೆ ವಿಲೀನಗೊಳಿಸಲು ಅಪೇಕ್ಷಿಸುತ್ತಿದ್ದಾರೆ: ತೆಲಂಗಾಣ ಸಿಎಂ  ಕೆ. ಚಂದ್ರೇಶೇಖರ್ ರಾವ್

ಹೈದ್ರಾಬಾದ್, ಆಗಸ್ಟ್ 17, 2022(www.justkannada.in): ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ತಮ್ಮ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಣೆಗೊಂಡು ರಾಯಚೂರಿನ ಜನರು ಅವರ ಜಿಲ್ಲೆಯನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಲು ಅಪೇಕ್ಷಿಸುತ್ತಿದ್ದಾರೆ ಎಂದಿದ್ದಾರೆ.

2016ರಲ್ಲಿ ತೆಲಂಗಾಣ ರಾಜ್ಯದ ವಾಯುವ್ಯ ಭಾಗದಲ್ಲಿ ಹೊಸದಾಗಿ ರಚಿಸಲ್ಪಟ್ಟ ವಿಕಾರಾಬಾದ್‌ ನಲ್ಲಿ ಹೊಸ ಜಿಲ್ಲಾಧಿಕಾರಿಗಳ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದ ಅವರು. ೨೦೧೪ರಲ್ಲಿ ಹೊಸದಾಗಿ ರಚಿಸಲ್ಪಟ್ಟ ತೆಲಂಗಾಣ ರಾಜ್ಯಕ್ಕೆ ಚಂದ್ರಶೇಖರ್ ರಾವ್ ಅವರು ಮುಖ್ಯಮಂತ್ರಿಯಾಗಿ ಚುನಾಯಿತರಾಗಿದ್ದಾರೆ.

ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ ರಾವ್ ಅವರು ತೆಲಂಗಾಣದ ಜನರಿಗೆ, ಬಿಜೆಪಿಯ ಬಾವುಟಗಳಿಂದ ಮೋಸ ಹೋಗದೇ ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕೋರಿದರು. ಪಶ್ಚಿಮ ತೆಲಂಗಾಣದ ಕಾಂಗ್ರೆಸ್ ಎಂಎಲ್‌ ಎ ರಾಜಗೋಪಾಲ್ ರೆಡ್ಡಿ ಅವರು ಇತ್ತೀಚೆಗೆ ರಾಜೀನಾಮೆ ನೀಡಿದರು. ಅವರು ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ತೆಲಂಗಾಣದ ಮುಮುಗೋಡೆ ಉಪಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿದೆ.

“ನೀವು ಕರ್ನಾಟಕದ ಅಂಚಿನಲ್ಲಿರುವ ತಂಡೂರಿಗೆ ಸಮೀಪದಲ್ಲಿರುವಿರಿ. ರಾಯಚೂರು ಜಿಲ್ಲೆಯ ಅಂಚಿನಲ್ಲಿರುವ ಕೆಲವು ಜನರು ಅವರ ಜಿಲ್ಲೆಯನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸುವಂತೆ ಅಥವಾ ಕರ್ನಾಟಕದಲ್ಲಿಯೂ ತೆಲಂಗಾಣದಂತಹ ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂದು ಕೋರಿದರು ಎಂದು ತಿಳಿಸುತ್ತಾ, ತಮ್ಮ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳಾದ ಕುಡಿಯುವ ನೀರಿಗಾಗಿ ಮಿಷನ್ ಭಗೀರಥ, ಗರ್ಭಿಣಿ-ಬಾಣಂತಿ ತಾಯಂದರಿಗೆ ಕೆಸಿಆರ್ ಕಿಟ್‌ ಗಳು, ಉಚಿತ ವಿದ್ಯುತ್ ಸರಬರಾಜು, ಪ್ರತಿ ಎಕರೆಗೆ ರೂ. ೧೦,೦೦೦ ವಾರ್ಷಿಕ ಕೃಷಿ ಪ್ರೋತ್ಸಾಹಧನ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕೆಸಿಆರ್ ಅವರು  ಈ ಹಿಂದೆಯೂ ಇಂತಹ ಹೇಳಿಕೆಯನ್ನು ನೀಡಿದ್ದರು. ಜೊತೆಗೆ ಮಹಾರಾಷ್ಟ್ರದ ನಾಂದೇಡ್‌ ನಂತಹ ಅಂಚಿನ ಪ್ರದೇಶಗಳ ಕುರಿತೂ ಉಲ್ಲೇಖಿಸಿದ್ದರು. ಹಿಂದಿನ ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರಾಂತ್ಯ ಬಹಳ ಹಿಂದುಳಿದಿದ್ದು, ಪ್ರತ್ಯೇಕ ರಾಜ್ಯವಾದ ನಂತರ ಯಾವ ರೀತಿ ಪ್ರಗತಿ ಸಾಧಿಸುತ್ತಿದೆ ಎಂದು ವಿವರಿಸಿದರು.

ಪ್ರತ್ಯೇಕ ರಾಜ್ಯದ ಹೋರಾಟದ ಸಂದರ್ಭದಲ್ಲಿ ತಾವು ಎದುರಿಸಿದ ತಡೆಗಳು ಹಾಗೂ ಸವಾಲುಗಳನ್ನು ಸ್ಮರಿಸಿಕೊಂಡ ಟಿಆರ್‌ಎಸ್ ಮುಖ್ಯಸ್ಥ ಕೆಎಸ್‌ ಆರ್, ಅವರು ೨೦೦೯ರಲ್ಲಿ ಕೊನೆಯವರೆಗೂ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದನ್ನು ಸ್ಮರಿಸಿಕೊಂಡರು.

“ನಮ್ಮ ರಾಜ್ಯದಲ್ಲಿರುವಂತಹ ಕಾರ್ಯಕ್ರಮಗಳು ಮತ್ಯಾವ ರಾಜ್ಯದಲ್ಲಿಯೂ ಇಲ್ಲ. ಈ ಹಿಂದೆ ತೆಲಂಗಾಣ ಭಾಗದ ರೈತರು ನಗರಗಳಲ್ಲಿ ಆಟೋಗಳನ್ನು ಓಡಿಸುತ್ತಿದ್ದರು. ಆದರೆ ಈಗ ಗ್ರಾಮೀಣ ಭಾಗವೂ ಸಹ ಪ್ರಗತಿ ಹೊಂದುತ್ತಿದೆ. ತೆಲಂಗಾಣದಲ್ಲಿ ಒಂದು ಎಕರೆ ಭೂಮಿಯ ಮೌಲ್ಯ ಇಂದು ನೆರೆಯ ರಾಜ್ಯಗಳಲ್ಲಿನ ಮೂರು ಎಕರೆ ಭೂಮಿಯ ಮೌಲ್ಯಕ್ಕೆ ಸಮವಾಗಿದೆ,” ಎಂದು ಕೆಸಿಆರ್ ಅಭಿಪ್ರಾಯಿಸಿದರು.

ತೆಲಂಗಾಣಕ್ಕೆ ಕೃಷ್ಣ ನದಿ ನೀರಿನ ಹೆಚ್ಚಿನ ಪಾಲು ಕೇಳಿದಾಗಿ ಪ್ರಧಾನಿ ನರೇಂದ್ರ ಮೋದಿಯವರು ತೆಲಂಗಾಣದ ಭಾಗಕ್ಕೆ ವಿರೋಧಿಯಂತಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. “ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿಯ ಒಂದೇ ಒಂದು ಉತ್ತಮ ಕೆಲಸವನ್ನು ನನಗೆ ತೋರಿಸಿ. ಆದರೆ, ನಮ್ಮ ಕಲ್ಯಾಣ ಯೋಜನೆಗಳನ್ನು ಮಾತ್ರ ಅವರು ಟೀಕಿಸಿ, ಉಚಿತ ಕೊಡುಗೆಗಳು ಎನ್ನುತ್ತಾರೆ,” ಎಂದು ರಾವ್ ಟೀಕಿಸಿದರು.

ರಾಜ್ಯದಲ್ಲಿ ಕೇವಲ ಉತ್ತಮ ಸರ್ಕಾರ ಇದ್ದರೆ ಸಾಲದು. ದೇಶದಲ್ಲಿ ನಿರುದ್ಯೋಗ ಪ್ರಮಾಣವನ್ನು ಗಮಿನಿಸಿ, ಕುಸಿಯುತ್ತಿರುವ ನಮ್ಮ ರೂಪಾಯಿಯ ಮೌಲ್ಯವನ್ನುನೋಡಿ. ಬಿಜೆಪಿ ಕೇವಲ ದೊಡ್ಡ ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಮಾತ್ರ ಅಧಿಕಾರದಲ್ಲಿದೆ. ಸಾಧ್ಯವಾದಷ್ಟು ಬೇಗ ಅವರನ್ನು ಮನೆಗೆ ಕಳುಹಿಸಿ, ಉತ್ತಮ ಸರ್ಕಾರವನ್ನು ತರಬೇಕಿದೆ ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: People – Raichur – district -Telangana:- CM- K. Chandrasekhar Rao