ಪೇಜಾವರಶ್ರೀ ಹೇಳಿಕೆಗೆ ಅದಮಾರು ಸ್ವಾಮೀಜಿ ಬೆಂಬಲ

Promotion

 

ಉಡುಪಿ,ಮಾರ್ಚ್,26,2021(www.justkannada.in):  ಬ್ರಾಹ್ಮಣ ಯುವತಿಯರ ವಿವಾಹ ಕುರಿತ ಪೇಜಾವರ ಶ್ರೀ ಹೇಳಿಕೆ ವಿಚಾರ ಪೇಜಾವರಶ್ರೀಗಳ ಹೇಳಿಕೆಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಪೇಜಾವರ ಶ್ರೀಗಳಿಗೆ ನನ್ನ ಪೂರ್ಣ ಪ್ರಮಾಣದ ಬೆಂಬಲ ಇದೆ ಎಂದು ಅದಮಾರು ಸ್ವಾಮೀಜಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಹಿರಿಯರ ಕಣ್ಗಾವಲಿನಿಂದ ತಪ್ಪುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳು ಕಾಳಜಿಯ ಮಾತನಾಡಿದ್ದಾರೆ. ಶಿಕ್ಷಣ ಮೌಲ್ಯ ಕಳೆದುಕೊಳ್ಳುತ್ತಿದೆ. ಯುವ ಜನಾಂಗ ದಾರಿ ತಪ್ಪಿ ಹೋಗುತ್ತಿದೆ. ಕಡೆಗಾಲದಲ್ಲಿ ತಮಗೆ ಯಾರು ಗತಿ ಇಲ್ಲವೆಂದು ಪೋಷಕರು ಪರದಾಡುತ್ತಿದ್ದಾರೆ. ಕುಟುಂಬವನ್ನು ನಿರ್ಲಕ್ಷಿಸಿದ ಯುವಕರ ಸ್ಥಿತಿಯೂ ಹದಗೆಡುತ್ತಿದೆ. ತಮ್ಮ ಮಕ್ಕಳು ದಾರಿ ತಪ್ಪಬಾರದು ಎಂದು ಹಿರಿಯರು ಹೇಳಿದರೆ ತಪ್ಪಿಲ್ಲ ಎಂದಿದ್ದಾರೆ. pejavarasri -statement- support-adamaru sri

ತಮ್ಮ ಮಕ್ಕಳು ಹೀಗೆಯೇ ಇರಬೇಕು ಎಂದು ಹಿರಿಯರು ಅಂದುಕೊಂಡರೆ ತಪ್ಪೇನು? ಆತುರದ ನಿರ್ಧಾರಗಳು ಅನಾಹುತ ತರುತ್ತೆ. ನಿರ್ಧಾರ ತೆಗೆದುಕೊಳ್ಳುವಾಗ ಮಕ್ಕಳು ಜಾಗರೂಕರಾಗಿರಬೇಕು. ಸಮಾಜವನ್ನು ತಿದ್ದುವ ಮಾತುಗಳನ್ನು ಶ್ರೀಗಳು ಆಡಿದರೆ ತಪ್ಪಿಲ್ಲ. ಸಮಾಜದ ಬಗೆಗಿನ ಕಾಳಜಿಯಿಂದ ಶ್ರೀಗಳು ಮಾತನಾಡಿದ್ದಾರೆ. ಪ್ರಸಿದ್ಧಿಗೆ ಬರಬೇಕು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ  ಎಂದು ಉಡುಪಿಯಲ್ಲಿ ಅದಮಾರು ಈಶಪ್ರೀಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

key words: pejavarasri -statement- support-adamaru sri