ಶಾಂತಿಯುತ ಪ್ರತಿಭಟನೆ ಮಾಡಿ:  ಹಿಂಸಾಚಾರ ಗಲಾಟೆ ಮಾಡಿದ್ರೆ ಕಠಿಣ ಕ್ರಮ- ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ….

ಶಿವಮೊಗ್ಗ,ಡಿ,23,2019(www.justkannada.in): ಪೌರತ್ವ ತಿದ್ಧುಪಡಿ ಕಾಯ್ದೆ ವಿರೋಧಿಸಿ ಧರಣಿ ಹಿನ್ನೆಲೆ, ಶಾಂತಿಯುತ ಪ್ರತಿಭಟನೆ ಮಾಡಿಬೇಕು.  ಹಿಂಸಾಚಾರ ಗಲಾಟೆ ಮಾಡಿದ್ರೆ ಕಠೀಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸಿಎಎಯಿಂದ ಯಾವುದೇ ತೊಂದರೆ ಆಗಲ್ಲ. ತೊಂದರೆ ಯಾಗದಂತೆ ನಾನು ನೋಡಿಕೊಳ್ಳುತ್ತೇನೆ.  ಪ್ರತಿಭಟನೆ ನಡೆಸುವವರು ಶಾಂತಿಯುತವಾಗಿ ಧರಣಿ ನಡಸಿ  ಶಾಂತಿ ಕಾಪಾಡಿ ಎಂದು ಮನವಿ ಮಾಡಿದರು.

ಪೊಲೀಸ್ ಫೈರಿಂಗ್ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ. ಸಿಐಡಿ ತನಿಖೆ ಎರಡು ನಡೆಯಲಿದೆ.  ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರಿಂದ ಪೊಲೀಸರಿಂದ ಫೈರಿಂಗ್ ಆಗಿದೆ.  ಮುಖಕ್ಕೆ ಬಟ್ಟೆಕಟ್ಟುಇಕೊಂಡು ಕೇರಳಾದವರಿಂದ ದಾಂಧಲೆ ನಡೆಸಲಾಗಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.

ಮಂಗಳೂರು ಗೋಲಿಬಾರ್ ಖಂಡಿಸಿ  ಗೃಹಸಚಿವರ ರಾಜೀನಾಮೆಗೆ ಆಗ್ರಹಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ, ಗೃಹ ಸಚಿವರ ರಾಜೀನಾಮೆ ಕೇಳಿದವರಿಗೆ ತಲೆಕಟ್ಟಿದೆ ಎಂದು ತಿರುಗೇಟು ನೀಡಿದರು.

Key words: peaceful –protest- Violent –action-CM BS Yeddyurappa- Warning.