‘ಪಿಂಕ್’ಗಾಗಿ ಬಣ್ಣ ಹಚ್ಚಿದ ಪವರ್ ಸ್ಟಾರ್ ಪವನ್​ ಕಲ್ಯಾಣ್

ಬೆಂಗಳೂರು, ಜನವರಿ 23, 2019 (www.justkannada.in): ಬರೋಬ್ಬರಿ ಎರಡು ವರ್ಷಗಳ ನಂತರ ಸಿನಿಮಾಗಾಗಿ ಪವರ್​ ಸ್ಟಾರ್​ ಬಣ್ಣ ಹಚ್ಚಿದ್ದಾರೆ.

ಹೌದು. ಪವನ್​ ಕಲ್ಯಾಣ್​ ಬಣ್ಣದ ಲೋಕಕ್ಕೆ ಮರಳಿದ್ದಾರೆ. 2018ರಲ್ಲಿ ತೆರೆಕಂಡಿದ್ದ ‘ಅಜ್ಞಾವಾಸಿ ಪವನ್​ ಅಭಿನಯದ ಕೊನೆಯ ಚಿತ್ರವಾಗಿತ್ತು.

ಪವನ್​ ಕಲ್ಯಾಣ್​ ಅಭಿನಯದ ಈ ಹೊಸ ಸಿನಿಮಾ ಹಿಂದಿಯಲ್ಲಿ ತೆರೆಕಂಡು ಬ್ಲಾಕ್​ಬಸ್ಟರ್​ ಹಿಟ್​ ಆದ ‘ಪಿಂಕ್​’ ರಿಮೇಕ್​. ‘ಪಿಂಕ್​’ನಲ್ಲಿ ಅಮಿತಾಭ್​ ಅಭಿನಯಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಪವನ್​ ನಿರ್ವಹಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಕಳೆದ ಸೋಮವಾರದಿಂದ ಆರಂಭವಾಗಿದೆ.