ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ : ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ 

ಬೆಂಗಳೂರು,ಡಿಸೆಂಬರ್,13,2020(www.justkannada.in) : KSRTC,BMTC,NWKRTC,NEKRTC ಈ ಎಲ್ಲ ನಿಗಮಗಳ ಸ್ವಾಸ್ಥ್ಯ ನನ್ನ ಮಿತ್ರರಾದ ದಿವಂಗರ ಎನ್.ಗೋಕುಲ್ ರಾಮ್, ಶಿವಕುಮಾರ್, ಲತಾ ಮತ್ತು ಉಪೇಂದ್ರ ತ್ರಿಪಾಠಿಯಯವರ ಉಸ್ತುವಾರಿಯಲ್ಲಿದ್ದಂತೆ ಈಗ ಸುಸ್ಥಿರವಾಗಿ ಉಳಿದಿಲ್ಲ. ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ. ಈಗ ಅಸ್ಥಿಪಂಜರ ಮಾತ್ರ ಉಳಿದಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ  ಬೇಸರವ್ಯಕ್ತಪಡಿಸಿದ್ದಾರೆ.logo-justkannada-mysore

KSRTC,BMTC,NWKRTC,NEKRTC ಸಿಬ್ಬಂದಿ ತಮ್ಮನ್ನೂ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಕೋರಿ ಮುಷ್ಕರ ನಡೆಸುತ್ತಿರುವುದು ತೀವ್ರ ಕಳವಳಕಾರಿ.  ಸಾರಿಗೆ ನೌಕರರು ಶ್ರಮಜಿವಿಗಳು, ಪ್ರಾಮಾಣಿಕ ಕೆಲಸಗಾರರು ಮತ್ತು ಒಂದು ಉತ್ತಮ ಪ್ಯಾಕೇಜ್ ಗೆ ಅರ್ಹರು ಎಂಬುದು ಪರಮಸತ್ಯ ಎಂದಿದ್ದಾರೆ.

ಇಂಥ ಪರಿಸ್ಥಿತಿಯಲ್ಲೂ ಅವರಿಗೆ ಸರ್ಕಾರಿ ನೌಕರರಿಗೆ ಸಮಾನ ವೇತನವನ್ನು ಸರ್ಕಾರ ನೀಡುತ್ತಿದೆ. ಸದ್ಯದ ಸಂದರ್ಭದಲ್ಲಿ ಸಾರಿಗೆ ನೌಕರರನ್ನು ಕಾನೂನುಬದ್ಧವಾಗಿ, ಪ್ರಾಯೋಗಿಕವಾಗಿ ಸರ್ಕಾರಿ ನೌಕರರು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸರ್ಕಾರಿ ವೇತನ ಮಾಪಕದೊಂದಿಗೆ ಸಮಾನತೆ ಇರುವ ಪ್ಯಾಕೇಜ್ ತೃಪ್ತಿದಾಯಕಕ್ಕಿಂತಲೂ ಅಧಿಕವಾಗಿದೆ. ಹಾಗೇ, ಸಾರಿಗೆ, ಸಿಬ್ಬಂದಿಯ ಕುಂದುಕೊರತೆಯನ್ನು ನಿರೀಕ್ಷೆಗೂ ಮೀರಿ ಸರ್ಕಾರ ಪರಿಹರಿಸುತ್ತಿದೆ ಎಂದು ವಿವರಿಸಿದ್ದಾರೆ.

ನಾನು ಮುಷ್ಕರ ನಿರತರಲ್ಲಿ ಮನವಿ ಮಾಡುತ್ತೇನೆ. ಸರ್ಕಾರ ನೀಡಿರುವ ಅವಕಾಶವನ್ನು ಗೌರವಯುತವಾಗಿ ಬಳಸಿಕೊಳ್ಳಿ. ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳಿ. ಇದರಿಂದ ನಿಗಮಗಳ ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ ಎಂದು ನನಗೂ ಗೊತ್ತಿದೆ. ಆದರೆ, ಅದನ್ನು ಹೇಗೋ ನಿಭಾಯಿಸಬಹುದು. ನೌಕರರು ಕೂಡಲೇ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಶುರು ಮಾಡಲಿ ಎಂದು ಮನವಿ ಮಾಡಿದ್ದಾರೆ.

Past-15 vultures-these-corporations-Meat-blood- sucked-Shankar Bidari-retired-IPS-officer

key words : Past-15 vultures-these-corporations-Meat-blood- sucked-Shankar Bidari-retired-IPS-officer