‘ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸದೆ ಪಾಸ್ ಮಾಡಿ’: ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಪ್ರತಿಭಟನೆ…

ಮೈಸೂರು,ಮೇ,24,2021(www.justkannada.in): ಕೊರೋನಾ ಸಂಕಷ್ಟ ಹಿನ್ನೆಲೆಯಲ್ಲಿ ಎಸ್‌ ಎಸ್‌ ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸದೆ ಪಾಸ್ ಮಾಡಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.jk

ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮೈಸೂರಿನ ಹಾರ್ಡಿಂಗ್ ಬಳಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ದ ಘೋಷಣೆ ಕೂಗಿ  ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಹದಿನೈದು ಲಕ್ಷ ವಿದ್ಯಾರ್ಥಿಗಳ ಜೊತೆ ಸಿಬ್ಬಂದಿ, ಶಿಕ್ಷಕರು ಕುಟುಂಬ ಸೇರಿ 25 ಲಕ್ಷ ಮಂದಿ ಆಗ್ತಾರೆ. ಹೀಗಾಗಿ ಕೊರೋನಾ ಸಂಕಷ್ಟದ ವೇಳೆ ಹದಿನೈದು ಲಕ್ಷ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ವಾಡಬೇಡಿ. ಪರೀಕ್ಷೆ ಮಾಡಬೇಡಿ. ಎಸ್‌ಎಸ್‌ಎಲ್‌ಸಿ ಪಿಯುಸಿ ಪರೀಕ್ಷೆ ನಡೆಸದೆ ಪಾಸ್ ಮಾಡಿ ಎಂದು ಆಗ್ರಹಿಸಿದರು.Pass -SSLC – PUC- without-exam- Vatal Nagaraj -protest - Mysore.

ಸೋಂಕು ಹರಡಿದ್ರೆ ಯಾರು ಹೊಣೆ. ವಿದ್ಯಾರ್ಥಿಗಳೇ ಪರೀಕ್ಷೆ ಬೇಡ ಎನ್ನುತ್ತಿದ್ದಾರೆ. ಛತ್ತಿಸ್‌ಘಡ ಮಾದರಿಯಲ್ಲಿ ಮನೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿ. ಕೆಲ ರಾಜ್ಯಗಳಲ್ಲಿ ಪರೀಕ್ಷೆ ಮುಂದೂಡಿದ್ದಾರೆ, ಜತೆಗೆ ರದ್ದು ಮಾಡಿದ್ದಾರೆ. ಸುರೇಶ್ ಕುಮಾರ್ ನಾನು ಹೇಳಿದ್ದೆ ಸರಿ ಎಂಬ ಹಠ ಮಾಡುತ್ತಾರೆ. ಇವರ ಬೇಜವಾಬ್ದಾರಿಯಿಂದ ಚಾಮರಾಜನಗರದಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಇವರಿಗೆ ಮಾನ ಮಾರ್ಯಾದೆ ಇದ್ರೆ ರಾಜೀನಾಮೆ‌ ಕೊಡಬೇಕಿತ್ತು. ಪ್ರಕರಣ ಸಂಬಂಧ ಇದುವರೆಗೂ ಒಬ್ಬರನ್ನ ಬಂಧಿಸಿಲ್ಲ. ನಾಳೆ ಸುರೇಶ್ ಕುಮಾರ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.

Key words: Pass -SSLC – PUC- without-exam- Vatal Nagaraj -protest – Mysore.