ಮೈಸೂರಿನಲ್ಲಿ ಇನ್ಮುಂದೆ ಪಾರ್ಕ್‌ಗಳು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ….

ಮೈಸೂರು, ಸೆಪ್ಟೆಂಬರ್, 07,2020(www.justkannada.in) : ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ಯಾನವನಗಳು ಹಾಗೂ ಆಟದ ಮೈದಾನಗಳಿಗೆ ಎಂದಿನಂತೆ ಸಾರ್ವಜನಿಕರು ಹಾಗೂ ನಾಗರೀಕರು ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದಾಗಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ.jk-logo-justkannada-logo

ಕೋವಿಡ್-19 ಮುನ್ನೇಚರಿಕೆ ಹಿನ್ನೆಲೆಯಲ್ಲಿ ಪಾಲಿಕೆಯು ಉದ್ಯಾನವನಗಳಿಗೆ ಹಾಗೂ ಆಟದ ಮೈದಾನಗಳ ಪ್ರವೇಶಕ್ಕೆ ನಿರ್ಭಂಧ ವಿಧಿಸಲಾಗಿತ್ತು. ವಾಹುವಿಹಾರಕ್ಕೆ ಅನುಕೂಲವಾಗುವಂತೆ ಸದರಿ ನಿರ್ಬಂಧವನ್ನು ತೆರವುಗೊಳಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ.parksplaygroundspublictodayfreeopenentry

 

ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ…

ಇನ್ನು ಮುಂದೆ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ಯಾನವನಗಳು ಹಾಗೂ ಆಟದ ಮೈದಾನಗಳಿಗೆ ಎಂದಿನಂತೆ ಸಾರ್ವಜನಿಕರು ಹಾಗೂ ನಾಗರೀಕರು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಲು, ಸ್ಯಾನಿಟೈಸರ್ ಉಪಯೋಗಿಸಲು ಮತ್ತು  ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Parks-today-Opportunity-access-playgrounds

key words : Parks-playgrounds-public-today-Free-open-entry