ಪಾಕಿಸ್ತಾನ: ಕ್ರಿಕೆಟ್ ಮೈದಾನದಲ್ಲಿ ಕೊನೆಯುಸಿರೆಳೆದ ಅಂಪೈರ್

ಕರಾಚಿ, ಅಕ್ಟೋಬರ್, 2019 (www.justkannada.in):  ಕ್ಲಬ್ ಟೂರ್ನಿಯ ಪಂದ್ಯದಲ್ಲಿ ಅಂಪೈರ್ ಮೈದಾನದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ನಸೀಮ್ ಶೈಕ್ ಎಂಬ ಅಂಪೈರ್ ಹೃದಯಾಘಾತದಿಂದ ಮೃತಪಟ್ಟವರು. ಕರಾಚಿಯ ಟಿಎಂಸಿ ಗ್ರೌಂಡ್‌ನಲ್ಲಿ ಲಾಯರ್‌ಗಳಿಗಾಗಿ ಟೂರ್ನಿ ನಡೆಯುತ್ತಿತ್ತು ಈ ವೇಳೆ ಅವಘಡ ನಡೆದಿದೆ.

ಮೇಲ್ವಿಚಾರಣೆಯಲ್ಲಿದ್ದ ಸ್ಥಳೀಯ ಕ್ರಿಕೆಟ್ ನಲ್ಲಿ ಖ್ಯಾತರಾಗಿದ್ದ ಅಂಪೈರ್ ನಸೀಮ್ ಶೈಕ್ ಇದ್ದಕ್ಕಿದ್ದಂತೇ ಮೈದಾನದಲ್ಲೇ ಕುಸಿದರು. ಅವರನ್ನು ಆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ನಸೀಮ್ ಕೊನೆಯುಸಿರೆಳೆದಿದ್ದರು.