ಭಾರತ-ಪಾಕ್ ಅಟ್ಟಾರಿ-ವಾಘಾ ಗಡಿಯಲ್ಲಿ ಯೋಧರ ನಡುವೆ ವಿನಿಮಯವಾಗದ ಸ್ವಾತಂತ್ರ್ಯ ದಿನದ ಶುಭಾಷಯ-ಸಿಹಿ

ನವದೆಹಲಿ:ಆ-14:(www.justkannada.in) ನಾಳೆ ಸ್ವಾಂತತ್ರ್ಯ ದಿನಾಚರಣೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಕಲ ಸಿದ್ಧತೆ ನದೆದಿದೆ. ಭಾರತದಿಂದ ಪ್ರತ್ಯೇಕಗೊಂದಿರುವ ಪಾಕಿಸ್ತಾನ ಪ್ರತಿ ವರ್ಷ ಆ.14ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತದೆ. ಉಭಯ ದೇಶಗಳ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹಿನ್ನಲೆಯಲ್ಲಿ ಪಂಜಾಬ್​ನ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತ-ಪಾಕ್ ಯೋಧರು ಪರಸ್ಪರ ಶುಭಕೋರಿ, ಸಿಹಿ ವಿನಿಮಯ ಮಾಡಿಕೊಳ್ಲುವುದು ಪದ್ಧತಿ. ಆದರೆ ಈ ವರ್ಷ ಇಂತಹ ಶುಷಾಯಯ ವಿನಿಮಯವಾಗಿಲ್ಲ ಎನ್ನಲಾಗಿದೆ.

ಜಮ್ಮು-ಕಾಶ್ಮೀರದ ಹಾಗೂ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಭಾರತ-ಪಾಕ್ ಯೋಧರು ಯಾವುದೇ ಶುಭಾಷಯ, ಸಿಹಿ ವಿನಿಮಯ ಮಾಡಿಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಹಾಗೂ 35ಎ ರದ್ದು ಪಡಿಸಿರುವ ಹಿನ್ನಲೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದೆ. ಅಲ್ಲದೇ ಗಡಿಯಲ್ಲಿ ಯುದ್ಧದ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್​ ಯೋಧರು ಭಾರತೀಯ ಯೋಧರ ಜತೆ ಸಿಹಿ ವಿನಿಮಯ ಮಾಡಿಕೊಂಡಿಲ್ಲ.

ಇನ್ನು ಬಕ್ರೀದ್​ ಹಬ್ಬದ ಸಂದರ್ಭದಲ್ಲಿ ಭಾರತೀಯ ಯೋಧರು ಪಾಕ್​ ಯೋಧರಿಗೆ ಸಿಹಿಯನ್ನು ಕೊಡಲು ಮುಂದಾಗಿದ್ದರೂ ಪಾಕ್​ ಯೋಧರು ಆ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು ಎನ್ನಲಾಗಿದೆ. ಬಕ್ರೀದ್​ ಸಂದರ್ಭದಲ್ಲಿ ತಾವು ಸಿಹಿ ವಿನಿಮಯ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಗಡಿಯಲ್ಲಿ ಕಾವಲಿರುವ ಪಾಕಿಸ್ತಾನಿ ರೇಂಜರ್​ ಪಡೆಯ ಮುಖ್ಯಸ್ಥರು ಭಾರತೀಯ ಸೇನಾಪಡೆಯ ಮುಖ್ಯಸ್ಥರಿಗೆ ಸ್ಪಷ್ಟಪಡಿಸಿದ್ದರು ಎಂದು ತಿಳಿದುಬಂದಿದೆ.

ಭಾರತ-ಪಾಕ್ ಅಟ್ಟಾರಿ ವಾಘಾ ಗಡಿಯಲ್ಲಿ ಯೋಧರ ನಡುವೆ ವಿನಿಮಯವಾಗದ ಸ್ವಾತಂತ್ರ್ಯ ದಿನದ ಶುಭಾಷಯ-ಸಿಹಿ

Pakistan I-Day: No exchange of sweets between BSF, Pak Rangers at Attari-Wagah Border