ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉರ್ದು ಕವಿ ಶಂಸುರ್ ರಹಮಾನ್ ಫಾರುಖಿ ನಿಧನ

ನವದೆಹಲಿ,ಡಿಸೆಂಬರ್,26,2020(www.justkannada.in) : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಉರ್ದು ಕವಿ, ವಿಮರ್ಶಕ ಶಂಸುರ್ ರಹಮಾನ್ ಫಾರುಖಿ(85) ನಿಧನರಾಗಿದ್ದಾರೆ.Teachers,solve,problems,Government,bound,Minister,R.Ashok

ಅಲಹಾಬಾದ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಕೋವಿಡ್‌ ಸೋಂಕು ಪೀಡಿತರಾಗಿದ್ದ ಅವರು ತಿಂಗಳ ಹಿಂದೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ನವೆಂಬರ್‌ 23ರಂದು ಮನೆಗೆ ಮರಳಿದ್ದರು.

ಆದರೆ,ಸೋಂಕಿನಿಂದ ಚೇತರಿಕೆಯಾದ ಬಳಿಕ ಅವರ ಕಣ್ಣಿನಲ್ಲಿ ಫಂಗಲ್ ಇನ್ ಫೆಕ್ಷನ್ ಆಗಿತ್ತು. ಆಸ್ಪತ್ರೆಯಿಂದ ಏರ್ ಆಂಬುಲೆನ್ಸ್ ಮೂಲಕ ಮನೆಗೆ ಬಂದ ಕೇವಲ ಆರ್ಧ ತಾಸಿನಲ್ಲೇ ಅವರ ಆರೋಗ್ಯ ಬಿಗಡಾಯಿಸಿ ಅವರು ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ಎನ್.ಆರ್.ಫಾರುಖಿ ಹೇಳಿದ್ದಾರೆ.

‘ಶೇರ್‌ ಇ ಶೋರ್‌ ಅಂಗೇಝ್‌’ಗೆ ಸರಸ್ವತಿ ಸಮ್ಮಾನ್‌ ಪುರಸ್ಕಾರ1935 ಸೆಪ್ಟೆಂಬರ್‌ 30ರಂದು ಉತ್ತರ ಪ್ರದೇಶದಲ್ಲಿ ಜನಿಸಿದ ಫಾರುಖಿ ಅವರು, 16ನೇ ಶತಮಾನದ ಉರ್ದು ಮೌಖಿಕ ಕಥೆ ಹೇಳುವ ಕಲಾ ಪ್ರಕಾರವಾದ ‘ದಸ್ತಂಗೊಯ್‌’ ಅನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 18ನೇ ಶತಮಾನದ ಕವಿ ಮಿರ್‌ ತಖಿ ಮಿರ್‌ ಕುರಿತು ಫಾರುಖಿ ಅವರು ರಚಿಸಿದ ನಾಲ್ಕು ಸಂಪುಟಗಳ ಸಂಶೋಧನಾ ಕೃತಿ ‘ಶೇರ್‌ ಇ ಶೋರ್‌ ಅಂಗೇಝ್‌’ಗೆ 1996ರಲ್ಲಿ ಸರಸ್ವತಿ ಸಮ್ಮಾನ್‌ ಪುರಸ್ಕಾರ ಲಭಿಸಿದೆ.

key words : Padma-Shri-award-Urdu-poet-Shamsur Rahman Farooqi-Died