ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣ: ಸಂಸದ ಶ್ರೀನಿವಾಸ್ ಪ್ರಸಾದ್ ರಾಜೀನಾಮೆಗೆ ಒತ್ತಾಯ…

ಮೈಸೂರು,ಮೇ,3,2021(www.justkannada.in): ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಸಂಸದ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡುವಂತೆ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಸರಗೂರು ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ವರುಣಾ ಮಹೇಶ್ ಆಗ್ರಹಿಸಿದ್ದಾರೆ.jk

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವರುಣಾ ಮಹೇಶ್, ಇತ್ತೀಚಿಗೆ ಕೊರೋನಕ್ಕೆ  ತುತ್ತಾಗಿ ಆಕ್ಸಿಜನ್ ಸಿಗದೆ ಮರಣ ಹೊಂದಿರುವಂತಹ ಎಲ್ಲಾ 24 ಕೋರೋನಾ ರೋಗಿಗಳ ಸಾವಿಗೆ  ಅಧಿಕಾರಿಗಳು ಹಾಗೂ ವೈದ್ಯರ ನಿರ್ಲಕ್ಷತನ ಕಾರಣ.   ಕಲಂ 304 A IPC ಸೆಕ್ಷನ್ ಅಡಿಯಲ್ಲಿ ಅಪರಾಧ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಸಂಸದ ಶ್ರೀನಿವಾಸ್ ಪ್ರಸಾದ ಅವರ ನಿರ್ಲಕ್ಷ್ಯತನ ಕಾರಣ. ಹೀಗಾಗಿ ಸಂಸದ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.    oxygen-death-chamarajanagar-demands-mp-srinivas-prasad-resignation

ಈ ವಿಷಯಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ದಿನೇ ದಿನೆ ಕರೋನಾ ರೋಗಿಗಳು ಹೆಚ್ಚಾಗುತ್ತಿದ್ದು ಸಾವುಗಳು ಸಹ ಕಡಿಮೆ ಏನು ಆಗುತ್ತಿಲ್ಲ. ಇದರ ವಿಷಯವಾಗಿ ಸಂಸದ  ಶ್ರೀನಿವಾಸ್ ಪ್ರಸಾದ್ ಅವರು ಒಂದು ಸಭೆ ನಡೆಸದೆ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರ ಕ್ರಮ ಕೈಗೊಂಡಿರುವ  ಮುಂಜಾಗೃತ ಸಭೆಯನ್ನು ಪರಿಶೀಲನೆ ಮಾಡದೆ ಸಂಸದರೆಂದು ಮರೆತು ಬೇಜವಾಬ್ದಾರಿತನ ತೋರಿದ್ದಾರೆ.  ಚಾಮರಾಜನಗರ  ಲೋಕಸಭಾ ವ್ಯಾಪ್ತಿಯಲ್ಲಿ ಸಾವುಗಳು  ಹೆಚ್ಚಾಗುತ್ತಿದ್ದರೂ ಸಹ  ಸಂಬಂಧಪಟ್ಟ ಜಿಲ್ಲಾ  ಆಡಳಿತದ ಜೊತೆ ಸಭೆ ನಡೆಸಿ  ಹೆಚ್ಚಿನ ರೀತಿಯಲ್ಲಿ   ಆಕ್ಸಿಜನ್ ಕೊರತೆಯನ್ನು ತುಂಬುವ ಕೆಲಸವನ್ನು  ಮಾಡಬಹುದಾಗಿತ್ತು. ಇದ್ಯಾವುದನ್ನೂ ಮಾಡದೆ ಮನೆಯಲ್ಲೇ ಇದ್ದುಕೊಂಡು ನಿರ್ಲಕ್ಷತನ ವನ್ನು ತೋರಿಸುತ್ತಿರುವ ಶ್ರೀನಿವಾಸಪ್ರಸಾದ್ ಕೂಡಲೇ ರಾಜೀನಾಮೆ ನೀಡಬೇಕೆಂದು  ವರುಣಾ ಮಹೇಶ್ ಆಗ್ರಹಿಸಿದ್ದಾರೆ.

Key words: Oxygen –death- Chamarajanagar- demands – MP -Srinivas Prasad -resignation