ಅಪಾರ್ಟ್​ಮೆಂಟ್ ಅಡವಿಟ್ಟು ಲೋನ್ ಪಡೆದ ಮಾಲೀಕ: ಲೀಸ್ ಮತ್ತು ಬಾಡಿಗೆಗೆ ಇದ್ದ ನಿವಾಸಿಗಳಿಗೆ ಶಾಕ್ ನೀಡಿದ ಬ್ಯಾಂಕ್ .

ಬೆಂಗಳೂರು,ಮಾರ್ಚ್,2,2023(www.justkannada.in): ಅಪಾರ್ಟ್​ಮೆಂಟ್ ಅಡವಿಟ್ಟು ಮಾಲೀಕ ಲೋನ್ ಪಡೆದು ಮರುಪಾವತಿಸದ ಹಿನ್ನೆಲೆ ಅಪಾರ್ಟ್​ಮೆಂಟ್​​ನ 29 ಫ್ಲ್ಯಾಟ್ ​ಗಳನ್ನು ಬ್ಯಾಂಕ್​ ಸೀಜ್​ ಮಾಡಿದ್ದು ಇದರಿಂದಾಗಿ ಬಾಡಿಗೆ ಮತ್ತು ಲೀಸ್ ಗಿದ್ದ ನಿವಾಸಿಗಳು ಸಂಕಷ್ಟಕ್ಕೊಳಗಾಗಿರುವ ಘಟನೆ ನಡೆದಿದೆ.

ಬೆಂಗಳೂರಿನ ರಾಜಾಜಿನಗರದ ಶಿವನಹಳ್ಳಿಯಲ್ಲಿರುವ ಶಿವಣ್ಣ ಎಂಬುವವರು  ತನ್ನ ಐಶ್ವರ್ಯ ಅಪಾರ್ಟ್​ಮೆಂಟ್ ಅ​ನ್ನು ಬ್ಯಾಂಕ್​ ಒಂದರಲ್ಲಿ ಅಡವಿಟ್ಟು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಸಾಲ ಮರುಪಾವತಿಸದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಬ್ಯಾಂಕ್​ ಸಿಬಂದ್ದಿಗಳು ಅಪಾರ್ಟ್​ಮೆಂಟ್​​ನ 29 ಫ್ಲ್ಯಾಟ್ ​ಗಳನ್ನು ಸೀಜ್​ ಮಾಡಿದ್ದಾರೆ. ಈ ಮೂಲಕ ಲೀಸ್​ ಮತ್ತು ಬಾಡಿಗೆಗೆ ಇದ್ದ ನಿವಾಸಿಗಳಿಗೆ ಬ್ಯಾಂಕ್​​​​ ಸಿಬ್ಬಂದಿ ಶಾಕ್​ ನೀಡಿದ್ದಾರೆ.

ಮನೆ ತೆರವು ವೇಳೆ ಬ್ಯಾಂಕ್ ಸಿಬ್ಬಂದಿ ಹಾಗೂ ನಿವಾಸಿಗಳ ನಡುವೆ ವಾಗ್ವಾದ ಉಂಟಾಗಿದ್ದು,  ಸದ್ಯ ಮನೆಗಳಲ್ಲಿದ್ದ ಸಾಮಾಗ್ರಿಗಳನ್ನ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಹೊರ  ಹಾಕಿದ್ದಾರೆ. ಇದರಿಂದಾಗಿ ಸುಮಾರು 100ಕ್ಕೂ ಹೆಚ್ಚು ಜನರು ಬೀದಿಗೆ ಬಿದ್ದಿರುವ ಪರಿಸ್ಥಿತಿ ಕಂಡು ಬಂದಿದೆ.

  ಬಾಡಿಗೆ ನಿವಾಸಿಗಳು, ನಮ್ಮ ಹಣ ನಮಗೆ ವಾಪಾಸ್ ಕೊಡಿ ಎಂದು ಮಾಲೀಕರ ಜೊತೆ ವಾಗ್ವಾದಕ್ಕಿಳಿದರು. ಈ ವೇಳೆ ಸ್ವಲ್ಪ ಸಮಯ ಕೊಡಿ ಎಂದು ಮಾಲೀಕ ಶಿವಣ್ಣ ಕೇಳಿದ್ದಾರೆ.

ಇನ್ನು ಬ್ಯಾಂಕ್ ಸಿಬ್ಬಂದಿಗಳು ಮತ್ತು ಮಾಲೀಕರ ನಡುವೆ ವಾಗ್ವಾದ ಉಂಟಾಗಿದ್ದು, ಮಾಹಿತಿ ನೀಡದೆಯೇ ಸೀಜ್ ಮಾಡೋಕೆ ಬಂದಿದ್ದೀರಾ ಎಂದು ಗಲಾಟೆ ಮಾಡಿದರು. ಈ ವೇಳೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ್ದು, ಬಳಿಕ ಸೀಜ್ ಕಾರ್ಯಚರಣೆ ಸ್ಥಗಿತ ಮಾಡಲಾಗಿದೆ. ನಾಳೆ ಮತ್ತೆ ಮುಟ್ಟುಗೋಕು ಹಾಕಲು ಬರುತ್ತೇವೆ ಬ್ಯಾಂಕ್ ಸಿಬ್ಬಂದಿಗಳು ಹೇಳಿ ಹೋಗಿದ್ದಾರೆ ಎನ್ನಲಾಗಿದೆ.

Key words: Owner – loan – apartment-Bank -shock – lease – rent- residents.