ಎರಡು ಲಕ್ಷ ಮನೆ ನಿರ್ಮಾಣ ನಮ್ಮ ಗುರಿ-ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ಬೆಂಗಳೂರು,ಆ,1,2019(www.justkannada.in): ರಾಜ್ಯದಲ್ಲಿ ಎರಡು ಲಕ್ಷ ಮನೆಗಳ ನಿರ್ಮಾಣ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಮೋದಿ ಅವರ ಕನಸು 3-4 ವರ್ಷಗಳಲ್ಲಿ ಬಡವರಿಗೆ ಮನೆ ಸಿಗಬೇಕು ಅಂತ.ಈ ನಿಟ್ಟಿನಲ್ಲಿ ಇವತ್ತು ವಸತಿ ಇಲಾಖೆ ಸಭೆ ಮಾಡಿದ್ದೇನೆ. ಈಗಾಗಲೇ 1 ಲಕ್ಷ ಮನೆ ನಿರ್ಮಾಣ ಕೆಲಸ ಪ್ರಾರಂಭವಾಗಿದೆ. ಎರಡು ಲಕ್ಷ ಮನೆ ನಿರ್ಮಾಣ ನಮ್ಮ ಗುರಿ ಇದೆ. ಇದಕ್ಕಾಗಿ 1 ಸಾವಿರ ಎಕರೆ ಜಾಗ ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದರು.

ಹಾಗೆಯೇ 14+ ಮಹಡಿ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಗುಜರಾತ್ ನಲ್ಲೂ ಇದೇ ಮಾದರಿಯ ಮನೆ ನಿರ್ಮಾಣ ಕೆಲಸ ಆಗಿದೆ. ನಮ್ಮ ರಾಜ್ಯದಲ್ಲೂ ಬಡವರಿಗೆ ಮನೆ ಕೊಡುವ ಕೆಲಸ ಮಾಡುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: Our –target- build- two lakh- houses-CM BS Yeddyurappa.