ಮುಖ್ಯಮಂತ್ರಿಯವರ ದರ್ಶನವೇ ನಮ್ಮ ಭಾಗ್ಯ. ನಮ್ಮ ಅದೃಷ್ಟ: ನಾವು ಮನವಿ ಕೊಡುವುದಿಲ್ಲ- ಗ್ರಾಮದ ಮಹಿಳೆಯರ ಮಾತು…

ರಾಮನಗರ, ಜೂ. 19,2019(www.justkannada.in):   ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನೋಡಬೇಕು…ಅದೇ ಭಾಗ್ಯ, ನಮ್ಮ ಅದೃಷ್ಟ ,ನಾವು ಮನವಿ ಕೊಡುವುದಿಲ್ಲ…ಇದು ಚನ್ನಪಟ್ಟಣ ತಾಲ್ಲೂಕಿನ ವಿವಿಧ ಭಾಗಗಳಲ್ಲಿ  ಗ್ರಾಮಗಳ ಮಹಿಳೆಯರ ಮಾತು.

ಹೌದು  ರಾಮನಗರದ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿನ್ನೆ ಕಣ್ವ ಜಲಾಶಯ ಪರಿಶೀಲನೆ ನಡೆಸಿ, ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದರು. ಈ ವೇಳೆ ಜನತಾ ದರ್ಶನ ನಡೆಸಿದ ಅವರಿಗೆ ಮನವಿ ಸಲ್ಲಿಸಲು ಗ್ರಾಮಸ್ಥರು ಮುಗಿ ಬಿದ್ದಿದ್ದರು. ಹೀಗಾಗಿ ವೇದಿಕೆ ಮುಂಭಾಗ ಕುಳಿತ್ತಿದ್ದ ಮಹಿಳೆಯರು, ಜಾಗ ಬಿಡ್ರಪ್ಪ. ನಾವು ಕುಮಾರಸ್ವಾಮಿ ಅವರ ಮುಖ ನೋಡಬೇಕು ಎಂದು ಮನವಿ ಮಾಡಿದರು.

ಇನ್ನು ಕೆಲ ಮಹಿಳೆಯರು ಕುರ್ಚಿಯಲ್ಲಿ ಕೂರದೆ ನಿಂತುಕೊಂಡೆ ಮುಖ್ಯಮಂತ್ರಿಗಳನ್ನು ನೋಡಲು ಪ್ರಯತ್ನ ಪಟ್ಟರು.  ಕೆಲ ಮಹಿಳೆಯರು ಮಾಧ್ಯಮಗಳ ಕ್ಯಾಮಾರದ ಸ್ಕ್ರೀನ್ ನಲ್ಲಿಯೇ ಮುಖ್ಯಮಂತ್ರಿಯವರನ್ನು  ಕಣ್ತುಂಬಿಕೊಂಡು ಮನೆ ಕಡೆ ಹೊರಟರು.

ನೇರಳೆ ಹಣ್ಣು ತಂದಿದ್ದ ಅಭಿಮಾನಿ…!

ರಾಂಪುರ ಕುಮಾರಸ್ವಾಮಿ ಎಂಬುವವರು ಮುಖ್ಯಮಂತ್ರಿಗಳಿಗಾಗಿ ನೇರಳೆ ಹಣ್ಣು ತಂದು ಕಾಯುತ್ತಿದ್ದರು. ಸಿಎಂ ಆಗಮನಕ್ಕೂ ಮುನ್ನವೇ ಬಂದಿದ್ದ ಸಚಿವರಾದ ಸಾ.ರಾ.ಮಹೇಶ್ ಮೊದಲು ನೇರಳೆ ಸವಿ ಸವಿದಿದ್ದರೆ, ಬಳಿಕ ಬಂದ ಮುಖ್ಯಮಂತ್ರಿಗಳು ಸಹ ನೇರಳೆ ಹಣ್ಣು ಸವಿದರು.

ಮುಖ್ಯಮಂತ್ರಿಯವರು ಕಾರು ಹತ್ತುವವರೆಗೂ ಮಹಿಳೆಯರು ಹಾಗೂ ಸ್ಥಳೀಯರ ಅಹವಾಲನ್ನು ಸಾವಧಾನದಿಂದ ಸ್ವೀಕರಿಸಿ ಸ್ಥಳದಲ್ಲೆ ಇದ್ದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಪರಿಹಾರಕ್ಕೆ ಸೂಚಿಸಿದರು.

ಬೇವೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಮುಖ್ಯಮಂತ್ರಿಯವರಿಗೆ ಸ್ಥಳೀಯ ಮುಖಂಡರು ಬೃಹತ್ ಹೂಮಾಲೆ ಹಾಕಿದರು. ಕೆಲವು ಮುಖಂಡರು ಮುಖ್ಯಮಂತ್ರಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.

Key words: Our fortune – vision – Chief Minister.-women-channapatna