ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಹಿನ್ನೆಲೆ: ಪ್ರತಿಭಟನೆ ನಡೆಸಲು ರೈತ ಸಂಘ ನಿರ್ಧಾರ…

Promotion

ಮಂಡ್ಯ,ಮೇ, 28,2019(www.justkannada.in):  9.19 ನೀರು ತಮಿಳುನಾಡಿಗೆ  ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡಿದ ಹಿನ್ನೆಲೆ  ಮಂಡ್ಯದಲ್ಲಿ ಇಂದು ಸಂಜೆ ಪ್ರತಿಭಟನೆ ರೈತ ಸಂಘ ನಿರ್ಧಾರ ಮಾಡಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ವಿರೋಧಿಸಿ ಮಂಡ್ಯ ರೈತ ಸಂಘದಿಂದ ಸಂಜೆ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದೆ. ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸುವ ಮೂಲಕ ಪ್ರಾಧಿಕಾರ ಕರ್ನಾಟಕಕ್ಕೆ ಮತ್ತೆ ಬರೆ ಎಳೆದಿದೆ.

ಸಭೆಯಲ್ಲಿ ಕರ್ನಾಟಕದಲ್ಲಿನ ಮಳೆ ಅಭಾವದ ಪರಿಸ್ಥಿತಿಯನ್ನ ಕರ್ನಾಟಕದ ಅಧಿಕಾರಿಗಳು ಮುಂದಿಟ್ಟಿದ್ದರು. ಆದರೆ ಕರ್ನಾಟಕದ ವಾದಕ್ಕೆ ಪ್ರಾಧಿಕಾರ ಮಣೆ ಹಾಕದೆ ನೀರು ಬಿಡುವಂತೆ ಆದೇಶಿಸಿದೆ. ಜೂನ್ ತಿಂಗಳ ಅಂತ್ಯದೊಳಗೆ 9.25 ಟಿಎಂಸಿ ನೀರು ಹರಿಸುವಂತೆ ತಮಿಳು ನಾಡು ಕೋರಿತ್ತು.

Key words: Order to release water to Tamil Nadu:  Farmers’ Association is ready to protest.

#Caveridispute #water #TamilNadu protest #mandya