ಗುತ್ತಿಗೆದಾರರ ಶೇ.65ರಂದ 70 ರಷ್ಟು ಬಿಲ್ ಬಿಡುಗಡೆಗೆ ಆದೇಶ- ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ.

Promotion

ಬೆಂಗಳೂರು,ಅಕ್ಟೋಬರ್,13,2023(www.justkannada.in): ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆಗೆ ಸರ್ಕಾರಕ್ಕೆ ಒಂದು ತಿಂಗಳು ಡೆಡ್ ಲೈನ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಗುತ್ತಿಗೆದಾರರ ಶೇಕಡಾ 65ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ, ಸರ್ಕಾರ ಬಂದು ಐದು ತಿಂಗಳಾದರೂ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಮಾಡಿಲ್ಲ. ಒಂದು ತಿಂಗಳೊಳಗೆ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೇ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಈ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಗುತ್ತಿಗೆದಾರರ ಶೇಕಡಾ 65ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇದ್ದರೂ ಬಿಲ್​ ಬಿಡುಗಡೆಗೆ ಆದೇಶ ಮಾಡಿದ್ದೇವೆ. ಗುತ್ತಿಗೆದಾರರಿಗೆ ಸಹಾಯ ಆಗಬೇಕು ಅಂತಾ ಆದೇಶಿಸಿದ್ದೇವೆ. ಸೀನಿಯಾರಿಟಿ ಮೇಲೆ ಬಿಲ್ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಾಬರಿಪಡುವ ಅಗತ್ಯವಿಲ್ಲ. ಗುತ್ತಿಗೆದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Key words: Order -release -65 to 70 percent – contractor’s bill – DCM DK Shivakumar