ಅಧಿವೇಶನಕ್ಕೆ ಮಾಧ್ಯಮ ಕ್ಯಾಮರಾಗಳ ನಿಷೇಧ ಪ್ರಜಾಪ್ರಭುತ್ವಕ್ಕೆ ಮಾರಕ- ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿ..

ಬೆಂಗಳೂರು,ಅ,12,2019(www.justkannada.in):  ವಿಧಾನಮಂಡಲ ಅಧಿವೇಶನದ ಚಿತ್ರೀಕರಣಕ್ಕೆ ಸುದ್ದಿಮಾಧ್ಯಮಗಳ ಕ್ಯಾಮರಾಗೆ ನಿಷೇಧ ಹೇರಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ ಸ್ಪೀಕರ್ ತಮ್ಮ ಆದೇಶವನ್ನ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದರು.

ಅಧಿವೇಶನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ವಿಚಾರವನ್ನ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಅಧಿವೇಶನಕ್ಕೆ ದೃಶ್ಯಮಾಧ್ಯಮ, ಫೋಟೋಗ್ರಾಫರ್ ಗೆ ಅವಕಾಶವಿತ್ತು ಈಗ ನಿಷೇಧ ಹೇರಿರುವುದು ಸರಿಯಲ್ಲ. ಸದನದ ಪಾರದರ್ಶಕತೆಗೆ ಮಾಧ್ಯಮಗಳು ಮುಖ್ಯ. ಶಾಸಕಾಂಗದಷ್ಟೇ ಮಾಧ್ಯಮವೂ ಮುಖ್ಯ, ಹೀಗಾಗಿ ಮತ್ತೊಮ್ಮೆ ಆದೇಶವನ್ನ ಪರಿಶೀಲಿಸಿ ಎಂದು ಮನವಿ ಮಾಡಿದರು.

ಅಧಿವೇಶನವನ್ನ ಇಡಿ ರಾಜ್ಯದ ಜನರು ನೋಡಬೇಕು. ಮಾಧ್ಯಮ ಕ್ಯಾಮರಾಗಳಿದ್ದರೇ ಶಾಸಕರು ಎಚ್ಚರದಿಂದಿರುತ್ತಾರೆ. ಕ್ಯಾಮರಾಗಳಿರುವುದರಿಂದ ಸದನದಲ್ಲಿ ಮಾತನಾಡಲು ಶಾಸಕರಿಗೆ ಹುಮ್ಮಸ್ಸು ಬರುತ್ತಿತ್ತು. ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಮಾಧ್ಯಮದ ಪರ ಟ್ವಿಟ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ.  ಅವರು ಮಾಧ್ಯಮದ ಪರ ಇದ್ದಾರೆ. ನನ್ನ ಅವಧಿಯಲ್ಲಿ ವಿಧಾನಸಭೆ ಟಿವಿ  ಆರಂಭಿಸಲು ಯತ್ನಿಸಿದ್ದೆ. ಆದರೆ ಅದನ್ನ ಕೈಬಿಟ್ಟೆ ಎಂದು ಸಿದ್ಧರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದರು.

Key words:  Opposition Leader- Siddaramaiah – Assembly –media- Restriction –democracy