ಪೆಟ್ರೋಲ್ ,ಡೀಸೆಲ್   ಜಿಎಸ್ ಟಿ ವ್ಯಾಪ್ತಿಗೆ ತರಲು ಎಲ್ಲಾ ರಾಜ್ಯಗಳಿಂದ ವಿರೋಧ.

ನವದೆಹಲಿ,ಸೆಪ್ಟಂಬರ್,17,2021(www.justkannada.in):  ದೇಶದಲ್ಲಿ ಪೆಟ್ರೋಲ್ ,ಡೀಸೆಲ್  ಏರಿಕೆಯಾಗುತ್ತಲೇ ಇದ್ದು ಈ ಮಧ್ಯೆ ಪೆಟ್ರೋಲ್ ಡೀಸೆಲ್ ಅನ್ನ ಜಿಎಸ್ ಟಿ ವ್ಯಾಪ್ತಿಗೆ ತರಲು ಎಲ್ಲಾ ರಾಜ್ಯಗಳು ವಿರೋಧಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಲಕ್ನೋದಲ್ಲಿ ಇಂದು ಜಿಎಸ್ ಟಿ ಮಂಡಳಿ ಸಭೆ ನಡೆಯಿತು. ಜಿಎಸ್ ಟಿ ವಿಧಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಮಧ್ಯೆ ಸಭೆಯಲ್ಲಿ ಪೆಟ್ರೋಲ್ ,ಡೀಸೆಲ್  ಜಿಎಸ್ ಟಿ ವ್ಯಾಪ್ತಿಗೆ ತರಲು ಎಲ್ಲಾ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ.

ಇನ್ನು ಹಣ್ಣಿನ ಜ್ಯೂಸ್ ಮೇಲಿನ ಜಿಎಸ್ ಟಿ ಶೇ.5 ರಿಂದ ಶೇ. 18ಕ್ಕೆ,  ಗಣಿ ಉತ್ಪನ್ನಗಳ ಮೇಲಿನ ಜಿಎಸ್ ಟಿ ಶೇ.5 ರಿಂದ ಶೇ.18ಕ್ಕೆ,  ಎಲ್ಲಾ ರೀತಿಯ ಲೋಹಗಳ ಮೇಲಿನ ಜಿಎಸ್ ಟಿ ಶೇ.13ಕ್ಕೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.

ಕಬ್ಬಿಣ, ತಾಮ್ರ, ಮ್ಯಾಂಗನೀಸ್, ನಿಕ್ಕಲ್, ಸತು ಮೇಲೆ ಶೇ.18ರಷ್ಟು ಜಿಎಸ್ ಟಿ ವಿಧಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಇನ್ನು ಪೇಪರ್ ಬ್ಯಾಗ್ ಗೆ ಶೇ.18 ರಷ್ಟು ಜಿಎಸ್ ಟಿ, ನವೀಕರಿಸಬಹುದಾದ ಇಂಧನಗಳ  ಮೇಲೆ ಶೇ.12 ರಷ್ಟು ಜಿಎಸ್ ಟಿ, ಹಾಗೆಯೇ ಮೆಹಂದಿ ಮೇಲೆ ಶೇ.5 ರಷ್ಟು, ಪೆನ್ನಿನ ಮೇಲೆ ಶೇ. 18ರಷ್ಟು ಜಿಎಸ್ ಟಿ  ವಿಧಿಸಲು ತೀರ್ಮಾನಿಸಲಾಗಿದೆ.

ಹಾಗೆಯೇ ಕೋವಿಡ್ ಔಷಧಗಳ ಮೇಲಿನ ವಿನಾಯಿತಿ ಡಿಸೆಂಬರ್ 31ರವರೆಗೆ ಮುಂದುವರೆಸಲು ಜಿಎಸ್ ಟಿ ಮಂಡಳಿ ಸಭೆಯಲ್ಲಿ ತಿರ್ಮಾನಿಸಲಾಗಿದೆ.

Key words: Opposition -all states – under- petrol and diesel-GST