ಹುಣಸೂರು ಪ್ರತ್ಯೇಕ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ಧರಾಮಯ್ಯಗೆ ತಿರುಗೇಟು ನೀಡಿದ ಹೆಚ್.ವಿಶ್ವನಾಥ್

ಮೈಸೂರು,ಅ,15,2019(www.justkannada.in):   ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

30 ಕಿ.ಮೀ ಗೊಂದು ಜಿಲ್ಲೆ ರಚನೆ ಮಾಡಲಾಗುತ್ತಾ ಎಂಬ ಮಾಜಿ ಸಿ.ಎಂ.ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟಿರುವ ಅನರ್ಹ  ಎಚ್.ವಿಶ್ವನಾಥ್, ಇದು ಕಿ.ಮೀ ಲೆಕ್ಕವಲ್ಲ, ಭೌಗೋಳಿಕ ಅಂಶವೂ ಅಲ್ಲ. ಸಿದ್ದರಾಮಯ್ಯ ಹೊಸ ಜಿಲ್ಲೆ ಬೇಡ ಎಂದು ಕಿ.ಮೀ ಬಗ್ಗೆ ಹೇಳ್ತಾರೆ.. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗಲೇ ಚಾಮರಾಜನಗರ ಜಿಲ್ಲೆಯಾಗಿಲ್ವೇ. ಧಾರವಾಡ ಮೂರು ಜಿಲ್ಲೆ ಆಗಿಲ್ವೇ..? ಎಂದು ಪ್ರಶ್ನಿಸಿದರು.

ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಹುಣಸೂರು ತಾಲ್ಲೂಕು ಕೇಂದ್ರವಾಗಿಟ್ಟುಕೊಂಡು ಹುಣಸೂರು ವಿಭಾಗದ 6 ತಾಲ್ಲೂಕುಗಳ ನೂತನ ಜಿಲ್ಲೆ ರಚನೆ ಮಾಡಬೇಕು. ಇದು ಆ ಭಾಗದ ಜನರ ಆಶಯ. ನಾನು ಈ ಬಗ್ಗೆ ಸಿಎಂ ಬಳಿ ಮಾತನಾಡಿಲ್ಲ. ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನು ಜನಾಭಿಪ್ರಾಯದ ಜೊತೆ ನಿಮ್ಮ ಬಳಿ ಬರುತ್ತೇನೆ ಎಂದಿದ್ದೇನೆ. ಇದು ಎಲೆಕ್ಷನ್ ಗಿಮಿಕ್ ಅಲ್ಲ, ಒಂದು ವರ್ಷದಿಂದ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೇನೆ. ಇದಕ್ಕಾಗಿ ಮೈತ್ರಿ ಸರ್ಕಾರದಲ್ಲಿ ಕೆಎಸ್‌ಆರ್‌ಟಿಸಿ ಡಿವಿಷನ್ ಆಫಿಸ್ ಮಾಡಿಸಿದ್ದೇನೆ ಡಿಡಿಪಿಐ ಕಚೇರಿಗೆ ಸ್ಥಳ ಹುಡುಕಲಾಗುತ್ತಿದೆ. ನಂತರ ಜನರ ಸಂಘಟನೆ ಮಾಡುವುದು ನಮ್ಮ‌ ಉದ್ದೇಶ ಎಂದರು.

ಚುನಾವಣೆಗಾಗಿ  ಈ ಕೆಲಸ ಮಾಡುತ್ತಿಲ್ಲ.

ಈ ಹಿಂದೆ ಸಮಿತಿಗಳ ಅಗತ್ಯ ಇತ್ತು, ಆದರೆ ಆಯೋಗಗಳೇ ಇಲ್ಲದೆ‌ ತುಮಕೂರು ರಾಮನಗರ ಜಿಲ್ಲೆ ಆಗಿದೆ. ದೇಶವೇ ಭಾರತ ಪಾಕಿಸ್ತಾನ ಎಂದು ವಿಭಜನೆ ಆಗಿದೆ. ಹೀಗಾಗಿ ಹುಣಸೂರು ಜಿಲ್ಲೆ ಮಾಡಬೇಕೆಂಬ ಪ್ರಸ್ತಾಪ ಜನರ ಮುಂದೆ ಇಟ್ಟಿದ್ದೇನೆ. ಚುನಾವಣೆಗಾಗಿ  ಈ ಕೆಲಸ ಮಾಡುತ್ತಿಲ್ಲ. ಇದು ಭೌಗೋಳಿಕ ವ್ಯಾಪ್ತಿಯಲ್ಲ, ಜನರ ಭಾವನೆ ಮುಖ್ಯ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಧಾರವಾಡ ಮೂರು ಭಾಗ ಆಯಿತು. ಎಲ್ಲಿಯೂ ಹೆಸರಿನಲ್ಲಿ ಜಿಲ್ಲೆ ಹೆಸರು ಇಟ್ಟಿಲ್ಲ ಎನ್ನುತ್ತಾರೆ. ಕೆಲವರು ಇತಿಹಾಸವನ್ನು ತಿಳಿದಿಲ್ಲ, ತಿಳಿದುಕೊಳ್ಳಲೂ ಹೋಗಿಲ್ಲ. ಕೂಪ ಮಂಡೂಕದಲ್ಲಿ ಕೆಲವು ನಾಯಕರಿದ್ದಾರೆ. ಹೈದರಾಬಾದ್ ನಲ್ಲಿ‌ಕೆವಿ. ರಂಗಾರೆಡ್ಡಿ ಜಿಲ್ಲೆ, ಪ್ರಕಾಶಂ ಜಿಲ್ಲೆ, ಅಲ್ಲೂರಿ ಸೀತಾರಾಮನ್ ಜಿಲ್ಲೆ. ತಮಿಳುನಾಡಿನಲ್ಲಿ ಪೆರಿಯಾರ್ ಎಂಜಿಆರ್ ಹೆಸರಿನಲ್ಲಿ ಜಿಲ್ಲೆ ಇದೆ ಎಂದು ಹೇಳಿದರು.

ಇದೇ ವೇಳೆ ಸಾರಾ. ಮಹೇಶ್  ಗೂ ತಿರುಗೇಟು ನೀಡಿದ ಹೆಚ್.ವಿಶ್ವನಾಥ್, ದೇವರಾಜ ಅರಸು ಕೇವಲ ವ್ಯಕ್ತಿ ಅಲ್ಲ, ಶಕ್ತಿ. ನನ್ನದು ಗಿಮಿಕ್ ಅಲ್ಲ, ಸಾ.ರಾ.ಮಹೇಶ್ ಮಾಡುತ್ತಿರುವುದು ಗಿಮಿಕ್. ನೀವೇ ಕೆಆರ್.ನಗರವನ್ನು ಸಾಲಿಗ್ರಾಮ ಅಂತ ಒಡೆದಿದ್ದೀರಿ. ಈ ವಿಚಾರದಲ್ಲಿ ಕುಮಾರಸ್ವಾಮಿ ಅವರದ್ದು ಉತ್ತಮ ಪ್ರತಿಕ್ರಿಯೆ ಎಂದರು.

ನಾನು ದೇವರಾಜ ಅರಸು ಸಲುವಾಗಿ ಚಪ್ಪಲಿ ಏಟು ತಿನ್ನಲು ರೆಡಿ…

ನಮಗೆ ಮೈಸೂರು ಎಂದರೇ ಇಷ್ಟ ಎಂಬ ಮಾಜಿ ಶಾಸಕ ಮಂಜುನಾಥ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ನಿಮಗೆ ಹುಣಸೂರಿನ‌ ಕಲ್ಲಹಳ್ಳಿಯ ದೇವರಾಜ ಅರಸು ಇಷ್ಟ ಆಗಲಿಲ್ವ? ಕೆಲವರು ವಿಶ್ವನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದಿದ್ದಾರೆ. ನಾನು ದೇವರಾಜ ಅರಸು ಸಲುವಾಗಿ ಚಪ್ಪಲಿ ಏಟು ತಿನ್ನಲು ರೆಡಿ. ನನಗೆ ಬುದ್ದಿ ಭ್ರಮಣೆಯಾಗಿಲ್ಲ, ಅಧಿಕಾರ ಹೋಗಿ ನಿಮಗೆ ಬುದ್ದಿ ಭ್ರಮಣೆ ಆಗಿದೆ ಎಂದು  ಹಾಸನ ಜಿಲ್ಲಾ ಜೆಡಿಎಸ್ ಮಾಧ್ಯಮ ವಕ್ತಾರನಿಗೆ ಟಾಂಗ್ ನೀಡಿದರು.

ಸಿದ್ದರಾಮಯ್ಯ ಹೊಸ ಜಿಲ್ಲೆ ಬೇಡ ಎಂದು ಕಿ.ಮೀ ಬಗ್ಗೆ ಹೇಳ್ತಾರೆ. ಯಾವುದೇ ಸಮಿತಿ ಅಧ್ಯಯನ ಮಾಡದೇ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರಚನೆಯಾದವು. ಈ ಬಗ್ಗೆಯೂ ನನ್ನ ಸ್ನೇಹಿತರು ಅಧ್ಯಯನ ಮಾಡಬೇಕಿದೆ. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗಲೇ ಚಾಮರಾಜನಗರ ಜಿಲ್ಲೆಯಾಗಿಲ್ವೇ ಧಾರವಾಡ ಮೂರು ಜಿಲ್ಲೆ ಆಗಿಲ್ವೇ..? ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಜಿಲ್ಲೆ ಆಗಬೇಕಿದೆ. ನಮ್ಮ ರಾಜ್ಯದಲ್ಲಿ ರಾಜ ಮಹಾರಾಜರ ಹೆಸರಲ್ಲಿ ಯಾವುದೇ ಜಿಲ್ಲೆಯಿಲ್ಲ. ಆದರೆ ತಮಿಳುನಾಡಿನಲ್ಲಿ ಪೆರಿಯಾರ್, ಎಂಜಿಆರ್ ಹೆಸರಲ್ಲಿ ಜಿಲ್ಲೆಯಿವೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

Key words: opposed – separate district – Hunsur- Former CM –Siddaramaiah-H.Viswanath-tong