ಮೈಸೂರಿನಲ್ಲಿ ಪೊಲೀಸರ ಕಾರ್ಯಾಚರಣೆ: ದ್ವಿಚಕ್ರ ಮತ್ತು ಮೊಬೈಲ್ ಕಳ್ಳರು ಅಂದರ್.

ಮೈಸೂರು,ಆಗಸ್ಟ್,5,2021(www.justkannada.in):  ಮೈಸೂರಿನ ದೇವರಾಜ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ 3ನೇ ಹಂತದ ಸಂತೋಷ್‌, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬಂಧಿತರಿಂದ ರೂ 5,00,000 ಮೌಲ್ಯದ 5 ದ್ವಿ ಚಕ್ರ ವಾಹನ ಮತ್ತು ರೂ 45,000 ಮೌಲ್ಯದ ಬಾಳುವ 3 ಮೊಬೈಲ್ ಫೋನ್‌ ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ದೇವರಾಜ ಪೊಲೀಸರು ಠಾಣಾ ವ್ಯಾಪ್ತಿಯ ಬಿ.ಎನ್. ರಸ್ತೆಯಲ್ಲಿ ಬೈಕ್ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಸಂತೋಷ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಇಬ್ಬರೂ ಸೇರಿಕೊಂಡು ಮೈಸೂರು, ಬೆಂಗಳೂರಿನಲ್ಲಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದರು.ಕಳವು ಮಾಡಿದಂತಹ ಬೈಕ್‌ ಗಳಲ್ಲಿಯೇ ರಸ್ತೆಗಳಲ್ಲಿ ಒಂಟಿಯಾಗಿ ಮೊಬೈಲ್‌ ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಗುರಿಯಾಗಿಸಿ ಮೊಬೈಲ್ ಸುಲಿಗೆ ಮಾಡುತ್ತಿದ್ದರು ಎನ್ನಲಾಗಿದೆ.

ಪತ್ತೆ ಕಾರ್ಯದಿಂದ ಮೈಸೂರು ನಗರದ ದೇವರಾಜ ಠಾಣೆಯ-1, ಮೇಟಗಳ್ಳಿ ಠಾಣೆಯ-1, ಬೆಂಗಳೂರು ಕೆ.ಪಿ. ಅಗ್ರಹಾರ ಠಾಣೆಯ-1, ಕೆಂಗೇರಿ ಠಾಣೆಯ-1, ಕಲಾಸಿ ಪಾಳ್ಯ ಠಾಣೆಯ-1 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಹಾಗೂ ಕೆಂಗೇರಿ ಠಾಣೆಯ -2, ಕಲಾಸಿ ಪಾಳ್ಯ ಠಾಣೆಯ-1 ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ.

ಮೈಸೂರು ನಗರ ಡಿ.ಸಿ.ಪಿ ಗೀತಪ್ರಸನ್ನ, ದೇವರಾಜ ವಿಭಾಗದ ಎ.ಸಿ.ಪಿ. ಶಶಿಧರ್ ಎಂ.ಎನ್. ಮಾರ್ಗದರ್ಶನದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ದಿವಾಕರ್.ಆರ್, ಲಷ್ಕರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್‌ ಅವರುಗಳ ನೇತೃತ್ವದಲ್ಲಿ ಪಿ.ಎಸ್.ಐ ಎಸ್ ರಾಜು ಮತ್ತು ಎಂ.ಆರ್ ಲೀಲಾವತಿ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Key words: Operation – police –Mysore- Bikes -obile –thieves- Arrest