ಮೈಸೂರಿನಲ್ಲಿ ನೂತನ ಪ್ಲಾಸ್ಮಾ ಕೇಂದ್ರ ಉದ್ಘಾಟನೆ…

ಮೈಸೂರು, ಅಕ್ಟೋಬರ್,2,2020(www.justkannada.in):  ಮೈಸೂರಿನ ಕೆ. ಆರ್. ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ಪ್ಲಾಸ್ಮಾ ಕೇಂದ್ರವನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟಿಸಿದರು.opening-new-plasma-center-mysore-kr-hospital-minister-st-somashekar

ಕೊರೋನಾ ಸೋಂಕಿತರ ಚಿಕಿತ್ಸೆಗೆ ಪ್ಲಾಸ್ಮಾ ನೆರವಾಗುವ ಹಿನ್ನೆಲೆ, ಕೆ. ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ನೂತನ ಪ್ಲಾಸ್ಮಾ ಘಟಕ ಪ್ರಾರಂಭ ಮಾಡಲಾಗಿದೆ. ಐಕ್ಯಾಟ್ ಏರ್ ಆ್ಯಂಬ್ಯುಲೆನ್ಸ್ ಸಂಸ್ಥೆ ವತಿಯಿಂದ 22 ಲಕ್ಷ ರೂ ಮೌಲ್ಯದ ಪ್ಲಾಸ್ಮಾ ಬೇರ್ಪಡಿಸುವ ಯಂತ್ರವನ್ನ ನೀಡಲಾಗಿದೆ. ಈ ಪ್ಲಾಸ್ಮಾ ಕೇಂದ್ರವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಉದ್ಘಾಟಿಸಿದರು.  opening-new-plasma-center-mysore-kr-hospital-minister-st-somashekar

ಕಾರ್ಯಕ್ರಮದಲ್ಲಿ ಶಾಸಕ ಎಲ್. ನಾಗೇಂದ್ರ, ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್ ಸೇರಿದಂತೆ ಕೆ. ಆರ್. ಆಸ್ಪತ್ರೆ ವೈದ್ಯಾಧಿಕಾರಿಗಳು ಭಾಗಿಯಾಗಿದ್ದರು.

Key words: Opening –New- Plasma Center – Mysore-KR hospital-minister- ST Somashekar