ಕೋವಿಡ್ ಲಸಿಕೆ ಅಭಿಯಾನಕ್ಕೆ ವರ್ಷ: 156 ಕೋಟಿ ಡೋಸ್ ಲಸಿಕೆ ನೀಡಿ ಹೊಸ ದಾಖಲೆ

ಬೆಂಗಳೂರು, ಜನವರಿ 17, 2022 (www.justkannada.in): ಕೋವಿಡ್-19 ವಿರುದ್ಧ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನಕ್ಕಾಗಿ ಭಾರತ ಒಂದು ವರ್ಷ ಪೂರೈಸಿದೆ.

156 ಕೋಟಿ ಡೋಸ್ ಲಸಿಕೆ ನೀಡಿ ಹೊಸ ದಾಖಲೆ ಬರೆಯಲಾಗಿದೆ. ಶನಿವಾರ ಒಟ್ಟು 66,21,395 ಕೋವಿಡ್-19 ಲಸಿಕೆಗಳನ್ನು ನೀಡಿರುವುದರಿಂದ ಲಸಿಕೆ ವ್ಯಾಪ್ತಿ 156 ಕೋಟಿ ಮೈಲಿಗಲ್ಲನ್ನು ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಒದಗಿಸಿದ ದತ್ತಾಂಶದ ಪ್ರಕಾರ, ಇದು ಒಂದು ವರ್ಷದೊಳಗೆ 156 ಕೋಟಿ ಡೋಸ್ ಗಳ ಅತ್ಯಂತ ವೇಗದ ಲಸಿಕೆ ಚಾಲನೆಯಾಗಿದೆ.

ಕೋವಿಡ್-19 ಲಸಿಕೆಗಾಗಿ ಗುರುತಿಸಲಾದ ಫಲಾನುಭವಿಗಳ ವರ್ಗಗಳಲ್ಲಿ, ಇಲ್ಲಿಯವರೆಗೆ 43 ಲಕ್ಷಕ್ಕೂ ಹೆಚ್ಚು ಮುನ್ನೆಚ್ಚರಿಕೆ ಡೋಸ್ ಗಳನ್ನು ನೀಡಲಾಗಿದೆ. ಒಟ್ಟು 43,19,278 ಮುನ್ನೆಚ್ಚರಿಕೆ ಡೋಸ್ ಗಳನ್ನು ನೀಡಲಾಗಿದೆ.