ಕೋವಿಡ್ ವಿರುದ್ದ ಹೋರಾಡುತ್ತಾ ಎಲ್ಲರ ಸಹಕಾರದಿಂದ ರಾಜ್ಯದ ಅಭಿವೃದ್ಧಿಗೆ ಶ್ರಮ–ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ…

ಬೆಂಗಳೂರು,ಜು,27,2020(www.justkannada.in):  ರಾಜ್ಯದಲ್ಲಿ ಅಭಿವೃದ್ಧಿಗೆ ಕೊರೋನಾ ಮಹಾಮಾರಿ ಅಡ್ಡಿಯಾಗಿದೆ. ಹೀಗಾಗಿ ಕೊರೋನಾ ವಿರುದ್ದ ಹೋರಾಡುತ್ತಾ ರಾಜ್ಯದ ಜನರ ಸರ್ವಾಂಗೀಣ ಅಭಿವೃದ್ಧಿಗೆ ಹೋರಾಡುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.jk-logo-justkannada-logo

ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದ ಪೂರೈಸಿದ ಹಿನ್ನೆಲೆ, ಇಂದು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಒಂದು ವರ್ಷದ ಸಾಧನೆಯ ಕಿರುಹೊತ್ತಿಗೆಯನ್ನ ಸಿಎಂ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದರು.

ಬಳಿಕ ಸರ್ಕಾರದ ಸಾಧನೆ ಬಗ್ಗೆ ಭಾಷಣ ಮಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಸರ್ಕಾರ ಬಂದು ನಿನ್ನೆಗೆ ಒಂದು ವರ್ಷವಾಗಿದೆ. ಉಳಿದ ಅವಧಿಯಲ್ಲಿ ಸುಭದ್ರ ಸರ್ಕಾರ ನೀಡಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಕೋವಿಡ್​ ಸಂದರ್ಭದಲ್ಲೂ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕೋವಿಡ್​ ಪಿಡುಗು ನಮ್ಮನ್ನು ಕಾಡಿಸದೇ ಇದ್ದಿದ್ದರೆ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಮಾಡಬಹುದಿತ್ತು. ಕರೊನಾ ಪಿಡುಗು ರಾಜ್ಯದ ಅಭಿವೃದ್ಧಿಗೆ ಕಂಟಕವಾಯಿತು ಎಂಬ ನೋವು ನನ್ನನ್ನು ಕಾಡುತ್ತಿದೆ. ಇದರ ನಡುವೆಯೂ ಸಹ ಪ್ರಧಾನಿ ಮೋದಿ ಅವರ ಆಶೀರ್ವಾದದಿಂದ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಕೊಂಚ ಮಟ್ಟಿಗೆ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ತಿಳಿಸಿದರು.one-year-bjp-govrnament-achievement-cm-bs-yeddyurappa

ರಾಜ್ಯದ ಜನರ ಸರ್ವಾಂಗಿಣ ಅಭಿವೃದ್ಧಿ ಗುರಿಯನ್ನ ಇಟ್ಟುಕೊಂಡಿದ್ದೇವೆ.ಎಲ್ಲರ ಸಹಕಾರದಿಂದ ಅಭಿವೃದ್ಧಿಗೆ ಶ್ರಮ ಪಡುತ್ತೇವೆ. ಕಿಸಾನ್ ಸಮ್ಮಾನ್ ಒಂದು ಐತಹಾಸಿಕ ಕಾರ್ಯಕ್ರಮ. ಅದು ರಾಜ್ಯದಲ್ಲೂ ಜಾರಿಯಾಗಿದೆ. ರೈತ ನೇಕಾರ ನನ್ನ ಎರಡನೇ ಕಣ್ಣು. ರೈತರಿಗಾಗಿ ರಾಜ್ಯ ಸರ್ಕಾರದಿಂದ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇವೆ. ಹಲವು ಟೀಕೆಗಳ ನಡುವೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಭೂಸುಧಾರಣೆಗೆ ಒತ್ತು ಕೊಡಲು ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿದ್ದೇವೆ. ರೈತರಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದ್ದೇವೆ.  ಭೂಸುಧಾರಣೆ ಕಾಯ್ದೆ ಉದ್ದೇಶವೇ ಉದ್ಯೋಗ. ಈ ವಿಚಾರದಲ್ಲಿ ಗೊಂದಲ ಬೇಡ. ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ಬಿಎಸ್ ವೈ ಮನವಿ ಮಾಡಿದರು.

ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗುವುದು. ನಾಡಿನ ಎಲ್ಲರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ. ಯಾವುದೇ ಬಡವರಿಗೆ ಮನೆ ಇಲ್ಲ ಎನ್ನಬಾರದು. ಹೀಗಾಗಿ  ಎಲ್ಲರಿಗೂ ಮನೆ ಕಟ್ಟಸಿಕೊಡುವ ಗುರಿ ಹೊಂದಿದ್ದೇವೆ. ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತೇವೆ. ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇವೆ ಎಂದು ತಿಳಿಸಿದರು.

ನಾನು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ಟೀಕಿಸುವವರ ಬಗ್ಗೆ ಗೌರವದಿಂದ ನಡೆದುಕೊಂಡಿದ್ದೇನೆ ಎಂದ ಸಿಎಂ ಬಿಎಸ್ ವೈ ಇನ್ಮುಂದೆ ಲಾಕ್ ಡೌನ್ ಬಗ್ಗೆ ಚರ್ಚೆಗೆ ಹೋಗುವುದಿಲ್ಲ. ರಾಜ್ಯದಲ್ಲಿ ಲಾಕ್ ಡೌನ್ ಇರುವುದಿಲ್ಲ.  ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಬಿಎಸ್ ವೈ ಸ್ಪಷ್ಟನೆ ನೀಡಿದರು.

Key words: One year’- BJP Govrnament- Achievement-CM BS yeddyurappa